* ಅಸ್ಸಾಂ-ಮೇಘಾಲಯ ಕೇಡರ್‌ನ 2004ರ ಬ್ಯಾಚ್‌ನ  ಹಿರಿಯ IPS ಅಧಿಕಾರಿ ಅನುರಾಗ್ ಕುಮಾರ್ ಅವರನ್ನು ಕೇಂದ್ರೀಯ ತನಿಖಾ ದಳದ (CBI) ಜಂಟಿ ನಿರ್ದೇಶಕರನ್ನಾಗಿ ನೇಮಿಸಲು ಸಂಪುಟದ ನೇಮಕಾತಿ ಸಮಿತಿಯು ಅನುಮೋದನೆ ನೀಡಿದೆ. * ಅನುರಾಗ್ ಕುಮಾರ್ ಅವರು ಸಿಬಿಐ ನ ಜಂಟಿ ನಿರ್ದೇಶಕರಾಗುವ ಮೊದಲು ಬ್ಯೂರೋ ಆಫ್ ಪೊಲೀಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ (BPR&D) ನಲ್ಲಿ ಸೇವೆ ಸಲ್ಲಿಸುತ್ತಿದ್ದರು.* ಸಂಪುಟದ ನೇಮಕಾತಿ ಸಮಿತಿಯು ಜಂಟಿ ನಿರ್ದೇಶಕರಾಗಿ ಅನುರಾಗ ಕುಮಾರ್ ಅವರ ಅಧಿಕಾರಾವಧಿಯನ್ನು ಫೆಬ್ರವರಿ 24, 2027 ರವರೆಗೆ ವಿಸ್ತರಿಸಲು ಅನುಮೋದಿಸಿದೆ.* ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (CBI) ಎಂಬುದು ಭಾರತದ ಪ್ರಧಾನ ತನಿಖಾ ಸಂಸ್ಥೆಯಾಗಿದ್ದು, ಭ್ರಷ್ಟಾಚಾರ, ಆರ್ಥಿಕ ಅಪರಾಧಗಳು ಮತ್ತು ಉನ್ನತ ಮಟ್ಟದ ಅಪರಾಧಗಳಿಗೆ ಸಂಬಂಧಿಸಿದಂತಹ ವ್ಯಾಪಕ ಶ್ರೇಣಿಯ ಕ್ರಿಮಿನಲ್ ಪ್ರಕರಣಗಳನ್ನು ತನಿಖೆ ಮಾಡುವ ಜವಾಬ್ದಾರಿಯನ್ನು ಹೊಂದಿದೆ.  * ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಸಂರಹಣೆಯಲ್ಲಿನ ಭ್ರಷ್ಟಾಚಾರದ ಪ್ರಕರಣಗಳನ್ನು ತನಿಖೆ ಮಾಡಲು ಸಿಬಿಐ ಅನ್ನು 1941 ರಲ್ಲಿ ವಿಶೇಷ ಪೊಲೀಸ್ ಸ್ಥಾಪನೆಯಾಗಿ ಸ್ಥಾಪಿಸಲಾಯಿತ್ತು.