Job Description: * ತಂಬಾಕು ನಿಯಂತ್ರಣದ ಮೂಲಕ ಸಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ವಿಶ್ವ ಅರೋಗ್ಯ ಸಂಸ್ಥೆ (WHO) ನೀಡುವ 2023 ನೇ ಸಾಲಿನ "ಪಾರ್ಟ್ನರ್ ಶಿಪ್ ಫಾರ್ ಹೆಲ್ದಿ ಸಿಟೀಸ್" ಪ್ರಶಸ್ತಿಯನ್ನು ಬೆಂಗಳೂರ ನಗರ ಪಡೆದುಕೊಂಡಿದೆ.* "ಪಾರ್ಟ್ನರ್ ಶಿಪ್ ಫಾರ್ ಹೆಲ್ದಿ ಸಿಟೀಸ್" ಪ್ರಶಸ್ತಿಯು 1.50 ಲಕ್ಷ ಡಾಲರ್ ಬಹುಮಾನ ಹೊಂದಿರುವ ಪ್ರಶಸ್ತಿಯಾಗಿದೆ,ಉತ್ತಮ ಆರೋಗ್ಯಕ್ಕೆ ಉತ್ತೇಜನ ಮತ್ತು ಅರೋಗ್ಯ ರಕ್ಷಿಸುವ ನಗರಗಳನ್ನು ನಿರ್ಮಿಸಲು ಬೆಂಬಲಿಸುವ ಮೂಲಕ ಪಾಲುದಾರಿಕೆಯಲ್ಲಿ ಕೆಲಸ ಮಾಡಲು ವಿಶ್ವ ಅರೋಗ್ಯ ಸಂಸ್ಥೆ ಬದ್ಧವಾಗಿದೆ.* WHO ನೀಡುವ "ಪಾರ್ಟ್ನರ್ ಶಿಪ್ ಫಾರ್ ಹೆಲ್ದಿ ಸಿಟೀಸ್" ಈ ಪ್ರಶಸ್ತಿಯನ್ನು ಬೆಂಗಳೂರು ನಗರದ ಜೊತೆಗೆ ಉರುಗ್ವೆಯ ಮಾಂಟೆವಿದೆಯೋ,ಮೆಕ್ಸಿಕೋದ ಮೆಕ್ಸಿಕೋ ಸಿಟಿ, ಕೆನಡಾದ ವ್ಯಾಕೋವರ್ ಹಾಗೂ ಗ್ರೀಸನ ಅಥೆನ್ಸ ನಗರಗಳು ಪಡೆದುಕೊಂಡಿವೆ.