* ತೆಲಂಗಾಣ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ರಾಜೀನಾಮೆ ನಂತರ ಜಾರ್ಖಂಡ್ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರಿಗೆ ತೆಲಂಗಾಣದ ಉಸ್ತುವಾರಿ  ಹೆಚ್ಚುವರಿಯಾಗಿ ರಾಜ್ಯಪಾಲರ ಜವಾಬ್ದಾರಿ ನೀಡಲಾಗಿದೆ. * ತೆಲಂಗಾಣ ರಾಜ್ಯಪಾಲ ಮಾರ್ಚ್ 18 ರಂದು (ಸೋಮವಾರ) ಸಾಂವಿಧಾನಿಕ ಹುದ್ದೆಗೆ ರಾಜೀನಾಮೆ ನೀಡಿದ ತಮಿಳಿಸೈ ಸೌಂದರರಾಜನ್ ಅವರ ಬದಲಿಗೆ ಜಾರ್ಖಂಡ್ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರಿಗೆ ತೆಲಂಗಾಣದ ಉಸ್ತುವಾರಿ ರಾಜ್ಯಪಾಲರಾಗಿ ಹೆಚ್ಚುವರಿ ಜವಾಬ್ದಾರಿಯನ್ನು ಮಾರ್ಚ್ 19. 2024ರಂದು (ಮಂಗಳವಾರ) ನೀಡಲಾಗಿದೆ. * ತಮಿಳಿಸೈ ಅವರ ರಾಜೀನಾಮೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಂಗೀಕರಿಸಲಾಗಿದೆ ಮತ್ತು ಅವರ ಬದಲಿಗೆ ರಾಧಾಕೃಷ್ಣನ್ ಅವರಿಗೆ ತೆಲಂಗಾಣದ ಹೆಚ್ಚುವರಿ ಉಸ್ತುವಾರಿ ಜೊತೆಗೆ ಅವರು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಅವರ ಹೆಚ್ಚುವರಿ ಜವಾಬ್ದಾರಿಗಳನ್ನು ಸಹ ನಿರ್ವಹಿಸಲಿದ್ದಾರೆ.* ಈ ಹಿಂದೆ ಸಿಪಿ ರಾಧಾಕೃಷ್ಣನ್ ಬಿಜೆಪಿಯ ಸದಸ್ಯರಾಗಿದ್ದರು ಮತ್ತು ಕೊಯಮತ್ತೂರಿನಿಂದ ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ತೆಲಂಗಾಣ ರಾಜ್ಯಪಾಲ ಮತ್ತು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಸೇವೆ ಸಲ್ಲಿಸಲು ಹೆಚ್ಚುವರಿ ಜವಾಬ್ದಾರಿಯನ್ನು ನೀಡಿದ್ದಕ್ಕಾಗಿ ಧನ್ಯವಾದಗಳು ಎಂದು ರಾಧಾಕೃಷ್ಣನ್ ತಿಳಿಸಿದ್ದಾರೆ.