Job Description: * ಸಂಸದರಾಗಿ ಗಣನೀಯ ಸೇವೆ ಸಲ್ಲಿಸುವ ಅತ್ಯುತ್ತಮ ಸಂಸದರಿಗೆ ನೀಡಲಾಗುವ ಪ್ರಶಸ್ತಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ರವರು ಪ್ರಥಮ ಬಾರಿಗೆ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.* ಉತ್ತಮ ಸೇವೆ ಸಲ್ಲಿಸಿರುವ ಸಂಸದರಿಗೆ ನೀಡುವ 'ಲೋಕಮತ್ ಸಂಸದೀಯ ಪ್ರಶಸ್ತಿ - 2022' ಅತ್ಯುತ್ತಮ ಸಂಸದ ಪ್ರಶಸ್ತಿ ನೀಡಲಾಗುತ್ತದೆ. 4 ನೇ ಆವೃತ್ತಿಯ ಈ ಪ್ರಶಸ್ತಿಯನ್ನು ತೇಜಸ್ವಿ ಸೂರ್ಯ ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪಡೆದಿದ್ದಾರೆ.* 17 ನೇ ಲೋಕಸಭಾ ಅವಧಿಯ ಎರಡನೇ ಅತೀ ಕಿರಿಯ ಸಂಸದರಾಗಿ 28ರ ವಯಸ್ಸಿನಲ್ಲಿ ಸಂಸದರಾಗಿ ಆಯ್ಕೆಯಾಗಿರುವ ತೇಜಸ್ವೀ ಸೂರ್ಯ, ಮಾಹಿತಿ ತಂತ್ರಜ್ಞಾನ ಸಂಸದೀಯ ಸ್ಥಾಯಿ ಸಮಿತಿ ಸದಸ್ಯರೂ ಆಗಿದ್ದು, ಪ್ರಾದೇಶಿಕ ಮತ್ತು ರಾಷ್ಟ್ರೀಯ ಹಿತಾಸಕ್ತಿಯ ಅನೇಕ ವಿಷಯಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿ ಗಮನ ಸೆಳೆದಿದ್ದಾರೆ.