Job Description: * 2022ರ ಜಲಶಕ್ತಿ ಅಭಿಯಾನ ಮಾರ್ಚ 14 ರಂದು ಅಂತ್ಯವಾಗಿದ್ದು ಉತ್ತರ ಪ್ರದೇಶ ಮೊದಲ ಸ್ಥಾನ ದಲ್ಲಿದೆ, ಮತ್ತು ಕರ್ನಾಟಕ 2ನೇ ಸ್ಥಾನದಲ್ಲಿದೆ. * ಜಲಶಕ್ತಿ ಅಭಿಯಾನದಲ್ಲಿ ಕರ್ನಾಟಕ ಕ್ಯಾಚ್ ದ ರೈನ್- 2022'ರಲ್ಲಿ ರಾಜ್ಯ ಎರಡನೇ ಸ್ಥಾನ ಗಳಿಸಿದೆ. ಮಾರ್ಚ್ 14ಕ್ಕೆ ಅಭಿಯಾನ ಅಂತ್ಯವಾಗಿದ್ದು, ಉತ್ತರ ಪ್ರದೇಶ ಪ್ರಥಮ ಸ್ಥಾನದಲ್ಲಿದೆ.* 2022ರ ಮಾ.29ರಂದು 'ಜಲಶಕ್ತಿ ಅಭಿಯಾನ' ಆರಂಭವಾಗಿತ್ತು, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ 'ಎಲ್ಲಿ, ಯಾವಾಗ ಮಳೆಯಾಗುತ್ತದೋ, ಅಲ್ಲಿ ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವುದು' ಎಂಬ ಘೋಷವಾಕ್ಯದೊಂದಿಗೆ ಪೂರ್ವ ಮುಂಗಾರು ಹಾಗೂ ಮುಂಗಾರು ಅವಧಿಯಲ್ಲಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಸೂಚಿಸಲಾಗಿತ್ತು.* ನೀರಿನ ಸಂರಕ್ಷಣೆ, ಮಳೆ ನೀರು ಸಂಗ್ರಹ, ಛಾವಣಿ ನೀರು ಸಂಗ್ರಹಕ್ಕೆ ಕಟ್ಟಡಗಳಲ್ಲಿ ಸೌಲಭ್ಯ ಕಲ್ಪಿಸುವುದು, ನೀರು ಸಂಗ್ರಹದ ಹೊಂಡಗಳು, ಹೊಸ ಚೆಕ್ ಡ್ಯಾಂ ನಿರ್ಮಾಣ, ಸಾಂಪ್ರದಾಯಿಕ ನೀರು ಸಂಗ್ರಹದ ವ್ಯವಸ್ಥೆಗಳಾದ ಬಾವಿ, ಕೆರೆಗಳ | ಪುನರುಜೀವನ, ಜಲಾನಯನ, ಕೊಳವೆಬಾವಿಗಳು ಮರುಬಳಕೆ-ಮರುಪೂರಣ, ಸಣ್ಣ ನದಿಗಳ ಪುನಶ್ವೇತನ, ಪ್ರವಾಹ ದಂಡೆಗಳ ಬಲವರ್ಧನೆಯಲ್ಲಿ 4 ಲಕ್ಷಕ್ಕೂ ಅಧಿಕ ಕಾಮಗಾರಿಗಳನ್ನು ರಾಜ್ಯದಲ್ಲಿ ನಡೆಸಲಾಗಿದೆ.