Job Description: * ಮಾರ್ಚ್ 16 ರಂದು ಟಾಟಾ ಕನ್ಸಲ್ಟೆನ್ಸ್ ಸರ್ವಿಸಸ್‌ನ (TCS) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಗೋಪಿನಾಥನ್ ರಾಜೀನಾಮೆ ನೀಡಿದ್ದಾರೆ. * ರಾಜೇಶ್ ಗೋಪಿನಾಥನ್ ರವರು ತೆರಳಿದ ಸ್ಥಾನಕ್ಕೆ ಕಂಪನಿಯ ಬಿಎಫ್‌ಎಸ್‌ಐ ವಿಭಾಗದ ಜಾಗತಿಕ ಮುಖ್ಯಸ್ಥ ಕೆ ಕೃತಿವಾಸನ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೂತನ ಸಿಇಒ ಆಗಿ ನೇಮಕ ಮಾಡಲಾಗಿದೆ.* ಟಿಸಿಎಸ್‌ ಸಂಸ್ಥೆಯಲ್ಲಿ ರಾಜೇಶ್ ಗೋಪಿನಾಥನ್ ರವರು 22 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, 2001ರಲ್ಲಿ ರಾಜೇಶ್ ಗೋಪಿನಾಥನ್ ಟಿಸಿಎಸ್ ಸಂಸ್ಥೆಗೆ ಸೇರ್ಪಡೆಯಾಗಿದ್ದರು. * ಸಂಸ್ಥೆಯಲ್ಲಿ ಹಲವಾರು ಸ್ಥಾನಗಳನ್ನು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದು, ರಾಜೇಶ್ ಗೋಪಿನಾಥನ್ ರಾಜೀನಾಮೆಯು ಅನಿರೀಕ್ಷಿತವಾಗಿದ್ದು, "ಕಳೆದ ವರ್ಷ 2027ರವರೆಗಿನ ಅವಧಿವರೆಗೆ ಸಂಸ್ಥೆಯ ಸಿಇಒ ಆಗಿ ನೇಮಕಗೊಂಡ ಗೋಪಿನಾಥನ್ ಸಂಸ್ಥೆಯನ್ನು ತೊರೆಯಲ್ಲಿದ್ದಾರೆ," ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.