Job Description: * ಅಂತರಾಷ್ಟ್ರೀಯ ಫುಟ್ ಬಾಲ್ ಫೆಡರೇಷನ್ (ಫಿಫಾ) ನೂತನ ಅಧ್ಯಕ್ಷರಾಗಿ ಸ್ವಿಟ್ಜರ್ ಲೆಂಡ್ ನ ಇನ್‌ಫ್ಯಾಂಟಿನೊ ಜಿಯಾನಿ ಅವರು ಆಯ್ಕೆಯಾಗಿದ್ದಾರೆ.* ಫಿಫಾ ಅಧ್ಯಕ್ಷ ಸ್ಥಾನಕ್ಕೆ ನಾಲ್ಕು ಮಂದಿ ಸ್ಪರ್ಧಿಸಿದ್ದು, ಜೋರ್ಡಾನ್‌ನ ಪ್ರಿನ್ಸ್ ಅಲಿ ಬಿನ್ ಅಲ್- ಹುಸೈನ್ ಹಾಗೂ ಫ್ರಾನ್ಸ್‌ನ ಜೆರೊಮ್ ಚಾಂಪೇನ್ ಕ್ರಮವಾಗಿ 27 ಹಾಗೂ 7 ಮತಗಳನ್ನು ಪಡೆದಿದ್ದರು. ಗಿಯಾನಿ ನಿರ್ಗಮನ ಅಧ್ಯಕ್ಷರಾಗಿ ಹಾಗೂ ಸೆಪ್ ಬ್ಲಾಟರ್ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. * ಯುರೋಪ್ ಫುಟಾಲ್ ಅಡಳಿತ ಮಂಡಳಿ ಯುಇಎಫ್‌ನಲ್ಲಿ 10 ವರ್ಷಗಳಿಂದ ಸೇವೆ ಸಲ್ಲಿಸಿರುವ ಗಿಯಾನಿ ಈ ಹಿಂದೆ ಫಿಥಾದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. * ವಿಶ್ವಕಪ್‌ನಲ್ಲಿ ತಂಡಗಳ ಸಂಖ್ಯೆಯನ್ನು 40ಕ್ಕೆ ಹೆಚ್ಚಿಸುವುದು ಸೇರಿದಂತೆ ಫಿಥಾದಲ್ಲಿ ಸಮಗ್ರ ಸುಧಾರಣೆ ತರಲು ಗಿಯಾನಿ ಬಯಸಿದ್ದಾರೆ.