* ಬಾರ್ಬಾಡೊಸ್ ದಲ್ಲಿ ಜೂನ್ 29 ರಂದು ನಡೆದ 2024 ರ ಟಿ20 ವಿಶ್ವಕಪ್ನಲ್ಲಿ ಭಾರತ ತಂಡವು 7 ರನ್ಗಳ ರೋಚಕ ವಿಜಯ ಸಾಧಿಸಿದೆ.   * ರಾಹುಲ್ ದ್ರಾವಿಡ್ ಮಾರ್ಗದರ್ಶನ, ರೋಹಿತ್ ನಾಯಕತ್ವ, ಕೊನೆ ಪಂದ್ಯದಲ್ಲಿ ಕೊಹ್ಲಿ ಆಟ ಗಮನ ಸೆಳೆಯಿತು. ಇನ್ನು ಬುಮ್ರಾ, ಅರ್ಷದೀಪ್, ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ ಹೀಗೆ ಪ್ರತಿಯೊಬ್ಬರು ಅದ್ಭುತ ಪ್ರದರ್ಶನ ನೀಡಿದ್ದಾರೆ.* ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡಕ್ಕೆ ವಿರಾಟ್ ಕೊಹ್ಲಿ 59 ಎಸೆತದಲ್ಲಿ 76 ರನ್ ಮತ್ತು ಅಕ್ಷರ್ ಪಟೇಲ್ 31 ಎಸೆತದಲ್ಲಿ 47 ರನ್ ಪಡೆದು ಬಲ ತುಂಬಿದರು. ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 72 ರನ್ ಸೇರಿಸಿದರು. * 177 ರನ್ ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 15 ಓವರ್ ಗಳಲ್ಲಿ 4 ವಿಕೆಟ್ 147 ರನ್ ಗಳಿಸಿ ಗೆಲುವಿನತ್ತ ಮುನ್ನುಗುತ್ತಿತ್ತು ಕೊನೆಯ 30 ಎಸೆತಗಳಲ್ಲಿ 30  ರನ್ ಬೇಕಿತ್ತು. ಅವರ ಬಳಿ 6 ವಿಕೆಟ್ ಗಳಿದ್ದವು ಈ ಹಂತದಲ್ಲಿ ತ್ರಿವಳಿ ವೇಗಿಗಳಾದ ಜಸ್ ಪೀತ್ ಬುಮ್ರಾ(2/18), ಹಾರ್ದಿಕ್ ಪಾಂಡ್ಯಾ, ಅರ್ಷದೀಪ್  ಸಿಂಗ್(2/20) ಊಹೆಗೂ ನಿಲುಕದ ಬೌಲಿಂಗ್ ದಾಳಿಯಿಂದ ಪಂದ್ಯದ ಗತಿಯನ್ನು ಬದಲಿಸಿದರು.* ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.  * ಜಸ್ ಪ್ರೀತ್ ಬುಮ್ರಾ 8 ಪಂದ್ಯದಲ್ಲಿ 15 ವಿಕೆಟ್ ಪಡೆದು ಸರಣಿ ಆಟಗಾರ ಪ್ರಶಸ್ತಿಗೆ ಭಾಜನಾಗಿದ್ದಾರೆ.* ಅರ್ಷದೀಪ್ ಸಿಂಗ್ ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ 8 ಪಂದ್ಯಗಳಲ್ಲಿ18 ವಿಕೆಟ್ ಪಡೆದು ದಾಖಲೆ ನಿರ್ಮಿಸಿದ್ದಾರೆ. * 2024ರ ಟಿ20 ವಿಶ್ವಕಪ್ ಚಾಂಪಿಯನ್ ಭಾರತ ತಂಡವು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿಂದ 2.45 ಮಿಲಿಯನ್ ಯುಎಸ್ ಡಾಲರ್ (ಅಂದಾಜು 20.42 ಕೋಟಿ ರೂಪಾಯಿ) ಮೊತ್ತವನ್ನು ಪಡೆದುಕೊಂಡುತು.* ಭಾರತ ವಿರುದ್ಧದ ಫೈನಲ್ ಹಣಾಹಣಿಯಲ್ಲಿ ಕಡಿಮೆ ಅಂತರದಿಂದ ಸೋತ ದಕ್ಷಿಣ ಆಫ್ರಿಕಾ 1.28 ಮಿಲಿಯನ್ ಯುಎಸ್ ಡಾಲರ್ (ಅಂದಾಜು 10.67 ಕೋಟಿ ರೂಪಾಯಿ) ಮೊತ್ತವನ್ನು ಪಡೆದುಕೊಂಡಿತು.