Job Description: ➤ ಜಾಗತಿಕ ವನ್ಯಜೀವಿ ಸಂರಕ್ಷಣೆಯ ಇತಿಹಾಸದಲ್ಲಿ ಭಾರತವು ಅತ್ಯಂತ ಪ್ರಮುಖ ಮತ್ತು ಐತಿಹಾಸಿಕ ಹೆಜ್ಜೆಯನ್ನಿಟ್ಟಿದೆ. ಭಾರತದ ನೇತೃತ್ವದಲ್ಲಿ ಆರಂಭವಾದ ಇಂಟರ್ನ್ಯಾಷನಲ್ ಬಿಗ್ ಕ್ಯಾಟ್ ಅಲಯನ್ಸ್ (IBCA) ಯೋಜನೆಗೆ ಜಾಗತಿಕ ಮಟ್ಟದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತಿದೆ. ಅಂತರರಾಷ್ಟ್ರೀಯ ಸಹಕಾರ ಮತ್ತು ತಂತ್ರಜ್ಞಾನದ ವಿನಿಮಯಕ್ಕಾಗಿ ಈ ಒಕ್ಕೂಟವನ್ನು ರಚಿಸಲಾಗಿದೆ.➤ ಬಿಗ್ ಕ್ಯಾಟ್ ಅಲಯನ್ಸ್ (IBCA): ವಿಶ್ವದ ಅತ್ಯಂತ ಪ್ರಮುಖ ಏಳು ಪ್ರಬೇಧಗಳ ದೊಡ್ಡ ಬೆಕ್ಕುಗಳ (Big Cats) ಸಂರಕ್ಷಣೆಗಾಗಿ ವಿಶ್ವದಾದ್ಯಂತ ಒಗ್ಗಟ್ಟಿನ ಹೋರಾಟ ನಡೆಸಲು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 2023 ರಲ್ಲಿ (ಪ್ರಾಜೆಕ್ಟ್ ಟೈಗರ್‌ನ 50ನೇ ವರ್ಷಾಚರಣೆಯ ಸಂದರ್ಭದಲ್ಲಿ) ಈ ಜಾಗತಿಕ ಒಕ್ಕೂಟವನ್ನು ಅಧಿಕೃತವಾಗಿ ಜಾರಿಗೆ ತಂದರು. ಇದರ ಪ್ರಧಾನ ಕಚೇರಿ ನವದೆಹಲಿಯಲ್ಲಿದೆ.➤ ಸಂರಕ್ಷಣೆಗೊಳಪಡುವ 7 ಪ್ರಮುಖ ಪ್ರಬೇಧಗಳು:ಹುಲಿ (Tiger)ಸಿಂಹ (Lion)ಚಿರತೆ (Leopard)ಹಿಮಚಿರತೆ (Snow Leopard)ಚೀತಾ (Cheetah)ಜಾಗೌರ್ (Jaguar)ಪುಮಾ (Puma)➤ ಈ ಯೋಜನೆಯ ಪ್ರಮುಖ ಗುರಿಗಳು: - ಪರಿಸರ ವ್ಯವಸ್ಥೆಯ ರಕ್ಷಣೆ: ಈ ದೊಡ್ಡ ಬೆಕ್ಕುಗಳು ಪರಿಸರ ವ್ಯವಸ್ಥೆಯ ಆಹಾರ ಸರಪಳಿಯ ಉನ್ನತ ಮಟ್ಟದಲ್ಲಿವೆ (Apex Predators). ಇವುಗಳ ರಕ್ಷಣೆಯಿಂದ ಇಡೀ ಕಾಡಿನ ಜೀವವೈವಿಧ್ಯ ಉಳಿಯುತ್ತದೆ.- ಹವಾಮಾನ ವೈಪರೀತ್ಯ ನಿಯಂತ್ರಣ: ದಟ್ಟವಾದ ಅರಣ್ಯಗಳನ್ನು ಸಂರಕ್ಷಿಸುವುದರಿಂದ ಇಂಗಾಲದ ಡೈಆಕ್ಸೈಡ್ ಹೀರಿಕೊಳ್ಳುವ ನೈಸರ್ಗಿಕ ವ್ಯವಸ್ಥೆ (Carbon Sinks) ಬಲಗೊಳ್ಳುತ್ತದೆ.- ಜಲ ಭದ್ರತೆ ಮತ್ತು ಜೀವನೋಪಾಯ: ಕಾಡುಗಳ ರಕ್ಷಣೆಯು ನದಿಗಳ ಉಗಮ ಸ್ಥಾನಗಳನ್ನು ರಕ್ಷಿಸುತ್ತದೆ ಮತ್ತು ಕಾಡಿನ ಸುತ್ತಮುತ್ತಲ ಜನರ ಸುಸ್ಥಿರ ಜೀವನೋಪಾಯಕ್ಕೆ ನೆರವಾಗುತ್ತದೆ.- ಅಕ್ರಮ ವನ್ಯಜೀವಿ ವ್ಯಾಪಾರಕ್ಕೆ ತಡೆ: ಜಾಗತಿಕ ಮಟ್ಟದಲ್ಲಿ ವನ್ಯಜೀವಿಗಳ ಬೇಟೆಯಾಡುವಿಕೆ ಮತ್ತು ಕಳ್ಳಸಾಗಣೆಯನ್ನು ತಡೆಯಲು ಜಂಟಿ ಕಾರ್ಯಾಚರಣೆ ಮತ್ತು ನೀತಿಗಳನ್ನು ರೂಪಿಸುವುದು.➤ ವನ್ಯಜೀವಿ ಸಂರಕ್ಷಣೆಯಲ್ಲಿ ಭಾರತವೇ ಜಾಗತಿಕ ನಾಯಕ:- ಹುಲಿಗಳ ರಾಜಧಾನಿ: ಪ್ರಸ್ತುತ ವಿಶ್ವದ ಒಟ್ಟು ಕಾಡು ಹುಲಿಗಳ ಪೈಕಿ ಶೇಕಡಾ 70 ಕ್ಕಿಂತ ಹೆಚ್ಚು ಹುಲಿಗಳು ಭಾರತದಲ್ಲಿವೆ.- ಏಷ್ಯಾಟಿಕ್ ಸಿಂಹಗಳ ಏಕೈಕ ನೆಲೆ: ವಿಶ್ವದಲ್ಲೇ ಏಷ್ಯಾಟಿಕ್ ಸಿಂಹಗಳು ನೈಸರ್ಗಿಕವಾಗಿ ಬದುಕುಳಿದಿರುವುದು ಗುಜರಾತ್‌ನ ಗಿರ್ ಅರಣ್ಯದಲ್ಲಿ ಮಾತ್ರ.- ಪ್ರಾಜೆಕ್ಟ್ ಚೀತಾ: ನಶಿಸಿಹೋಗಿದ್ದ ಚೀತಾ ಪ್ರಬೇಧವನ್ನು ಆಫ್ರಿಕಾದಿಂದ ತಂದು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮರುಪರಿಚಯಿಸುವ ಮೂಲಕ ಭಾರತ ಜಾಗತಿಕ ಗಮನ ಸೆಳೆದಿದೆ.➤ ತರಬೇತಿ ಹಬ್ ಆಗಿ ಮಾರ್ಪಟ್ಟ ಅಭಯಾರಣ್ಯಗಳು:- ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನ.- ಕರ್ನಾಟಕದ ಹೆಮ್ಮೆಯ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳು.- ವಿಶೇಷ ಕಾರಿಡಾರ್‌ಗಳು: ಅಭಿವೃದ್ಧಿ ಯೋಜನೆಗಳಲ್ಲೂ ವನ್ಯಜೀವಿಗಳ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತಿದ್ದು, ಇದಕ್ಕೆ ಪ್ರಮುಖ ಉದಾಹರಣೆಯೆಂದರೆ ದಿಲ್ಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇನಲ್ಲಿ ವನ್ಯಜೀವಿಗಳ ಮುಕ್ತ ಸಂಚಾರಕ್ಕಾಗಿ ನಿರ್ಮಿಸಲಾಗಿರುವ ಬೃಹತ್ ಅಂಡರ್ ಪಾಸ್ ಮತ್ತು ವಿಶೇಷ ಪರಿಸರ ಕಾರಿಡಾರ್‌ಗಳು.➤ ಒಕ್ಕೂಟದ ಜಾಗತಿಕ ವಿಸ್ತರಣೆ (ಸದಸ್ಯತ್ವದ ವಿವರ): ಪ್ರಸ್ತುತ ಬಿಗ್ ಕ್ಯಾಟ್ ಅಲಯನ್ಸ್ ವಿಶ್ವದ 95 ಶ್ರೇಣಿಯ ದೇಶಗಳೊಂದಿಗೆ (Range Countries) ಸಂಪರ್ಕದಲ್ಲಿದೆ.- ಇತ್ತೀಚೆಗೆ ಸೌದಿ ಅರೇಬಿಯಾ ಈ ಒಕ್ಕೂಟಕ್ಕೆ ಸೇರ್ಪಡೆಗೊಳ್ಳುವುದಾಗಿ ಅಧಿಕೃತವಾಗಿ ಘೋಷಿಸಿದ್ದು, ಇದರೊಂದಿಗೆ ಒಕ್ಕೂಟದ ಅಧಿಕೃತ ಸದಸ್ಯ ದೇಶಗಳ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.- ಈ ಒಕ್ಕೂಟಕ್ಕೆ ಜಾಗತಿಕ ಸಂಸ್ಥೆಗಳಾದ WWF (World Wide Fund for Nature) ಮತ್ತು UNDP (United Nations Development Programme) ನಿಕಟವಾಗಿ ಕೈಜೋಡಿಸಿವೆ.- ಭಾರತ ಸರ್ಕಾರವು ಈ ಒಕ್ಕೂಟದ ಆರಂಭಿಕ ಐದು ವರ್ಷಗಳ (2023-24 ರಿಂದ 2027-28) ಕಾರ್ಯಚಟುವಟಿಕೆಗಳಿಗಾಗಿ 150 ಕೋಟಿ ರೂ. ಗಳ ಆಯವ್ಯಯದ ಬೆಂಬಲವನ್ನು ನೀಡಿದೆ.ಉದ್ಯೋಗದ ಹೊಸ ಅಧಿಸೂಚನೆಗಳು ಈಗ ನಿಮ್ಮ ಮೊಬೈಲ್‌ನಲ್ಲಿ! ಇಂದೇ 'KPSCVaani' ಆಪ್ ಡೌನ್‌ಲೋಡ್ ಮಾಡಿ.