* 'ಸುಸ್ವಾಗತಂ' ಪೋರ್ಟಲ್‌ ಅನ್ನು ಜುಲೈ 25ರಿಂದ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದು, ಆಗಸ್ಟ್ 9ರ ವರೆಗೆ 10 ಸಾವಿರಕ್ಕೂ ಹೆಚ್ಚು ಪಾಸ್‌ಗಳನ್ನು ಈ ಪೋರ್ಟಲ್‌ ಮೂಲಕ ನೀಡಲಾಗಿದೆ. * ಎಲ್ಲಾ ಪಾಸ್‌ಗಳನ್ನು ಆನ್‌ಲೈನ್‌ ಮೂಲಕವೇ ನೀಡಲಾಗುವುದು ಎಂದು ವಿವರಿಸಿದ್ದಾರೆ.* ಸಂವಿಧಾನದ 370ನೇ ವಿಧಿಯಡಿ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ್ದ ಕೇಂದ್ರದ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಪೋರ್ಟಲ್‌ ಆರಂಭಿಸಿರುವುದಾಗಿ ಆಗಸ್ಟ್ 10 ರಂದು ಘೋಷಿಸಿದೆ.* ವಿಚಾರಣೆಗೆ ಹಾಜರಾಗಲು ಹಾಗೂ ವಕೀಲರನ್ನು ಭೇಟಿಯಾಗಲು ನ್ಯಾಯಾಲಯಕ್ಕೆ ಬರುವವರು ಸುಸ್ವಾಗತಂ' ಪೋರ್ಟಲ್‌ ಮೂಲಕ ಇ-ಪಾಸ್‌ಗೆ ನೋಂದಣಿ ಮಾಡಬಹುದು ಎಂದು ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಹೇಳಿದ್ದಾರೆ.