* 2023ರ ಆನೆ ಗಣತಿ ವರದಿಯ ಪ್ರಕಾರ ಕರ್ನಾಟಕದಲ್ಲಿ ಒಟ್ಟು 6,395 ಆನೆಗಳಿರುವುದು ಕಂಡುಬಂದಿದೆ, ಆನೆಗಳ ಸಂಖ್ಯೆಯಲ್ಲಿ ಕರ್ನಾಟಕ ದೇಶದಲ್ಲೇ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ. * 2023ರಲ್ಲಿ ಪ್ರೊ| ಆರ್. ಸುಕುಮಾರ್ರವರ ನೇತೃತ್ವದ ಭಾರತೀಯ ವಿಜ್ಞಾನ ಸಂಸ್ಥೆಯ (ISC) ತಾಂತ್ರಿಕ ನೆರವಿನೊಂದಿಗೆ ಕರ್ನಾಟಕ ಅರಣ್ಯ ಇಲಾಖೆಯು ಅನೆಗಳ ಗಣತಿಯನ್ನು ಮಾಡಿದೆ. *   ಆನೆಗಳ ಗಣತಿಯನ್ನು ಪ್ರತಿ 5 ವರ್ಷಗಳಿಗೊಮ್ಮೆ ಮಾಡಲಾಗುತ್ತದೆ. 2017ರಲ್ಲಿ ಕರ್ನಾಟಕ  ರಾಜ್ಯದಲ್ಲಿ ಸುಮಾರು 6049 ಆನೆಗಳಿದ್ದವು. 2023ರ ಗಣತಿಯ ಪ್ರಕಾರ ಕರ್ನಾಟಕದಲ್ಲಿ 6,395 ಆನೆಗಳಿವೆ ಎಂದು ಅಂದಾಜು ಮಾಡಲಾಗಿದ್ದು 350 ಆನೆಗಳು ಹೆಚ್ಚಳವಾಗಿರುವುದು ಕಂಡುಬಂದಿದೆ.* ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕ ದೇಶದಲ್ಲೇ 2ನೇ ಸ್ಥಾನದಲ್ಲಿರುವುದು ಇತ್ತೀಚಿಗೆ ಬಿಡುಗಡೆಯಾದ ಹುಲಿ ಗಣತಿ ಇಂದ ಗೊತ್ತಾಗಿತ್ತು. ಈಗ ಆನೆ ಗಣತಿಯ ಪ್ರಕಾರ ಕರ್ನಾಟಕ ದೇಶದಲ್ಲೇ ಮೊದಲನೇ ಸ್ಥಾನದಲ್ಲಿದೆ.* 2023 ರ ಮೇ ತಿಂಗಳಲ್ಲಿ ನಡೆಸಿದ್ದ ಆನೆ ಗಣತಿಯ ಅಂಕಿ ಅಂಶಗಳನ್ನು ಅರಣ್ಯ ಇಲಾಖೆ ಬಿಡುಗಡೆ ಮಾಡಿದ್ದು ಸರಾಸರಿ 1116 ಆನೆಗಳೊಂದಿಗೆ ಬಂಡೀಪುರ ಇಡೀ ರಾಜ್ಯದಲ್ಲೇ ಅತೀ ಹೆಚ್ಚು ಆನೆಗಳಿರುವ ತಾಣವಾಗಿ ಹೊರಹೊಮ್ಮಿದೆ.*  ನಾಗರಹೊಳೆ ಹುಲಿಸಂರಕ್ಷಿತ ಪ್ರದೇಶದಲ್ಲಿ 831 , ಮಹದೇಶ್ವರ ವನ್ಯಧಾಮದಲ್ಲಿ 706, ಹಾಗು ಬಿ‌ಆರ್‌ಟಿ ಹುಲಿಸಂರಕ್ಷಿತ ಪ್ರದೇಶದಲ್ಲಿ 619 ಆನೆಗಳು ಕಂಡುಬಂದಿವೆ. * ಕರ್ನಾಟಕ ರಾಜ್ಯದಲ್ಲೇ ಯಲ್ಲಾಪುರ ವಿಭಾಗವು ಕೇವಲ 2 ಆನೆಗಳಿರುವುದರಿಂದ ಅತಿ ಕಡಿಮೆ ಆನೆಗಳಿರುವ ತಾಣವಾಗಿದೆ.