* ಬಿಡದಿಯ ಕೈಗಾರಿಕಾ ಪ್ರದೇಶದಲ್ಲಿ ರಾಜ್ಯದ ಪ್ರಥಮ ತ್ಯಾಜ್ಯ ಇಂಧನ ಘಟಕ ಅಕ್ಟೋಬರ್ ನಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಇಂಧನ ಸಚಿವರಾದ ಜಾರ್ಜ್ ಅವರು (K.J George) ತಿಳಿಸಿದ್ದಾರೆ.  * ತ್ಯಾಜ್ಯ ಇಂಧನ ಘಟಕ ಸುಮಾರು 15 ಎಕರೆ ವಿಸ್ತೀರ್ಣದಲ್ಲಿ 280 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. 600 ಟನ್ ಸಾಮರ್ಥ್ಯ ಇರುವ ಇಂಧನ ಘಟಕವಾಗಿದ್ದು, ಇಲ್ಲಿ 11.5 ಮೆಗಾ ವ್ಯಾಟ್ ಪವರ್ ಉತ್ಪಾದನೆಯಾಗಲಿದೆ ಎಂದು ತಿಳಿಸಿದ್ದಾರೆ.* ಇದರಿಂದ ಬೆಂಗಳೂರಿನ ಕಸಕ್ಕೆ ಮುಕ್ತಿ ನೀಡುವ ಜೊತೆಗೆ ಇಂಧನ ಉತ್ಪಾದನೆಗೆ ಕ್ರಮವಹಿಸಲಾಗಿದ್ದು, ಈ ಕಸವನ್ನ ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದರ ಜೊತೆಗೆ ಇಂಧನ ಉತ್ಪಾದನೆಯನ್ನೂ ಮಾಡುವುದು ಇದರ ಗುರಿ ಎಂದಿದ್ದಾರೆ.