* ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸು ನೀತಿಯನ್ನು ಪ್ರಕಟಿಸಿದೆ ಮತ್ತು ರೆಪೋ ದರವನ್ನು ಶೇಕಡಾ 6.50 ಕ್ಕೆ ಬದಲಾಯಿಸದೆ. RBI ಯ ಹಣಕಾಸು ನೀತಿ ಸಮಿತಿ (MPC) ರೆಪೊ ದರವನ್ನು 6.50 ಶೇಕಡಾದಲ್ಲಿ ಇರಿಸಲು ನಿರ್ಧರಿಸಿದೆ ಎಂದು ಗವರ್ನರ್ ಶಕ್ತಿಕಾಂತ ದಾಸ್ ಹೇಳಿದರು. * ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ನಿರ್ಣಕ್ಕೆ ಹಣಕಾಸು ನೀತಿ ಸಮಿತಿ (MPC)  ಸಭೆಯಲ್ಲಿ ಭಾಗವಹಿಸಿದ್ದ 6 ಸದಸ್ಯರಲ್ಲಿ ಐವರು ಒಪ್ಪಿಗೆ ನೀಡಿದ್ದಾರೆ ಎಂದು ದಾಸ್ ಅವರು ತಿಳಿಸಿದರು.* ಆರ್‌ಬಿಐನ ಹಣಕಾಸು ನೀತಿ ಸಮಿತಿ (MPC) ಸಭೆಯಲ್ಲಿ ಆರು ಮಂದಿ ಸದಸ್ಯರು ಭಾಗವಹಿಸಿದ್ದರು, ಗವರ್ನರ್ ಶಕ್ತಿಕಾಂತ್‌ ದಾಸ್ ಅವರೊಂದಿಗೆ ಆರ್‌ಬಿಐನ ಕಾರ್ಯನಿರ್ವಾಹಕ ನಿರ್ದೇಶಕ ರಾಜೀವ್ ರಂಜನ್, ಉಪ ಗವರ್ನರ್ ಮೈಕೆಲ್ ದೇಬಬ್ರತ, ಶಶಾಂಕ್ ಭಿಡೆ, ಅಶಿಮಾ ಗೋಯಲ್ ಮತ್ತು ಜಯಂತ್ ಆರ್ ವರ್ಮಾ ಭಾಗಿಯಾಗಿದ್ದರು. * ಆರ್ಥಿಕ ಚಟುವಟಿಕೆಯು ಸ್ಥಿತಿಸ್ಥಾಪಕತ್ವವನ್ನು ಹೊಂದಿದೆ ಮತ್ತು FY 23-24 ರಲ್ಲಿ ನೈಜ GDP ಬೆಳವಣಿಗೆಯು 7.6 ಶೇಕಡಾ ದಾಖಲಾಗಿದೆ. * ಪ್ರಸ್ತುತ ಚಿಲ್ಲರೆ ಹಣದುಬ್ಬರ ದರವು ಶೇ. 5ಕ್ಕಿಂತ ಹೆಚ್ಚಿದ್ದು, ರಿಸರ್ವ್ ಬ್ಯಾಂಕ್ ಇದನ್ನು ಶೇ. 4ಕ್ಕಿಂತ ಕಡಿಮೆ ಮಾಡಲು ಬಯಸುತ್ತಿದೆ. ಫೆಬ್ರವರಿಯಲ್ಲಿ ಚಿಲ್ಲರೆ ಹಣದುಬ್ಬರವು ಶೇ. 5.09ಕ್ಕೆ ಇಳಿಕೆ ಕಂಡಿತ್ತು. ಮಾರ್ಚ್ ತಿಂಗಳ ಅಂಕಿ-ಅಂಶಗಳುಲ್ಲಿ ಇನ್ನಷ್ಟು ಕಡಿಮೆಯಾಗಲಿದೆ ಎಂದು ಆರ್‌ಬಿಐ ನಿರೀಕ್ಷಿಸುತ್ತಿದೆ.* ಪ್ರಸಕ್ತ ಸರಣಿಯಲ್ಲಿ ಚಿಲ್ಲರೆ ಹಣದುಬ್ಬರವು ಕನಿಷ್ಠ ಮಟ್ಟಕ್ಕೆ ಇಳಿದಿದ್ದರೂ, ಆಹಾರ ಪದಾರ್ಥಗಳ ವಿಷಯದಲ್ಲಿ ಹಣದುಬ್ಬರದ ಪರಿಸ್ಥಿತಿ ಅನಿಶ್ಚಿತವಾಗಿದೆ ಎಂದು ಆರ್‌ಬಿಐ ಗವರ್ನರ್ ತಿಳಿಸಿದ್ದಾರೆ.