* 2024ರ ಫೋರ್ಬ್ಸ್‌ ಅತಿ ಶ್ರೀಮಂತರ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಕೇಶ್ ಅಂಬಾನಿ ಅತ್ಯಂತ ಶ್ರೀಮಂತ ಭಾರತೀಯರಾಗಿ ಮುಂದುವರೆದಿದ್ದು, ವಿಶ್ವದ ಅಗ್ರ 10 ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ 9ನೇ ಸ್ಥಾನ ಪಡೆದಿದ್ದಾರೆ. * ಫೋರ್ಬ್ಸ್ ಪ್ರಕಾರ 66 ವರ್ಷದ ಮುಕೇಶ್ ಅಂಬಾನಿ ಅವರ ಸಂಪತ್ತು ಕಳೆದ ವರ್ಷದ 83 ಬಿಲಿಯ ಡಾಲರ್ (6.93 ಲಕ್ಷ ಕೋಟಿ ರೂಪಾಯಿ)ನಿಂದ ಈ ಬಾರಿ 116 ಬಿಲಿಯ ಡಾಲರ್ (9.68 ಲಕ್ಷ ಕೋಟಿ ರೂಪಾಯಿ)ಗೆ ಏರಿಕೆಯಾಗಿದೆ. * ಇದರೊಂದಿಗೆ, 100 ಬಿಲಿಯನ್ ಡಾಲರ್ಗಿಂತ ಹೆಚ್ಚಿನ ಸಂಪತ್ತು ಹೊಂದಿದವರ ಗುಂಪಿಗೆ ಸೇರ್ಪಡೆಗೊಂಡ ಮೊದಲ ಏಶ್ಯನ್ ಅವರಾಗಿದ್ದಾರೆ. ಇನ್ನು ಫೋರ್ಬ್ಸ್‌ ಪಟ್ಟಿಯಲ್ಲಿ ಗೌತಮ್ ಅದಾನಿ ಅವರು ಎರಡನೇ ಅತ್ಯಂತ ಶ್ರೀಮಂತ ಭಾರತೀಯರಾಗಿದ್ದು, ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 17ನೇ ಸ್ಥಾನದಲ್ಲಿದ್ದಾರೆ.* ಫೋರ್ಬ್ಸ್ 2024 ರ ಬಿಲಿಯನೇರ್‌ಗಳ ಪಟ್ಟಿಯಲ್ಲಿ 200 ಭಾರತೀಯರು ಸ್ಥಾನ ಪಡೆದಿದ್ದಾರೆ. ಜಾಗತಿಕವಾಗಿ ಅತಿ ಹೆಚ್ಚು ಬಿಲಿಯನೇರ್ ಗಳನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ 3ನೇ ಸ್ಥಾನ ಪಡೆದಿದೆ. ವಿಶ್ವಾದ್ಯಂತ ಬಿಲಿಯನೇರ್ ಗಳ ಸಂಖ್ಯೆ 2,781 ಇದೆ. ಈ ಪೈಕಿ ಹೆಚ್ಚೂಕಡಿಮೆ ಶೇ. 10ರಷ್ಟು ಕುಬೇರರು ಭಾರತದಲ್ಲಿ ಇದ್ದಾರೆ. * ಈ ಭಾರತೀಯರ ಒಟ್ಟು ಸಂಪತ್ತು $ 954 ಶತಕೋಟಿಯಷ್ಟಿದೆ, ಇದು ಕಳೆದ ವರ್ಷ $ 675 ಶತಕೋಟಿಗೆ ಹೋಲಿಸಿದರೆ 41 ಶೇಕಡಾ ಹೆಚ್ಚಾಗಿದೆ.