Job Description: * ಮೈಸೂರು ಕೇಂದ್ರ ಕಚೇರಿ ಹೊಂದಿರುವ ಕೇನ್ಸ್‌ ಟೆಕ್ನಾಲಜಿ ಕಂಪನಿಯ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ರಮೇಶ್‌ ಕಣ್ಣನ್‌ ಅವರು ಅಮೆರಿಕದ 'ಫೋರ್ಬ್ಸ್‌' ನಿಯತಕಾಲಿಕ ಪ್ರಕಟಿಸುವ ಬಿಲಿಯನೇರ್‌ಗಳ (ಶತಕೋಟ್ಯಧಿಪತಿ) ಪಟ್ಟಿಗೆ ಇದೇ ಮೊದಲ ಬಾರಿಗೆ ಸೇರ್ಪಡೆಯಾಗಿದ್ದಾರೆ.* 2024ರ ಸಾಲಿನ ಫೋರ್ಬ್ಸ್ ಇಂಡೆಕ್ಸ್ನಲ್ಲಿ ಮೊದಲ ಬಾರಿಗೆ ಸೇರ್ಪಡೆಯಾದ 25 ಭಾರತೀಯ ಬಿಲಿಯನೇರ್ಗಳಲ್ಲಿ ರಮೇಶ್ ಅವರು ಕೂಡ ಒಬ್ಬರು. ಫೋರ್ಬ್ಸ್ ಪ್ರಕಾರ ರಮೇಶ್ ಕುನ್ಹಿಕಣ್ಣನ್ ಅವರ ಆಸ್ತಿಮೌಲ್ಯ 1.2 ಬಿಲಿಯನ್ ಡಾಲರ್ ಇದೆ. ಅಂದರೆ ಸುಮಾರು 10,000 ಕೋಟಿ ರೂ ಮೊತ್ತದ ಶ್ರೀಮಂತರು.* ದೇಶದ ಹೆಗ್ಗಳಿಕೆಗೆ ಪಾತ್ರವಾದ 'ಚಂದ್ರಯಾನ-3'ರ ನೌಕೆಯ ಲ್ಯಾಂಡರ್ ಹಾಗೂ ರೋವರ್‌ಗೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಇಸ್ರೋಗೆ ಪೂರೈಕೆ ಮಾಡಿದ್ದ ಈ ಕಂಪನಿಯ ಷೇರುಗಳ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾದ ಪರಿಣಾಮ ರಮೇಶ್ ಅವರ ಸಂಪತ್ತಿನಲ್ಲೂ ಏರಿಕೆ ಕಂಡಿದೆ ಎಂದು ತಿಳಿಸಲಾಗಿದೆ.* ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಕೇನಸ್ ಟೆಕ್ನಾಲಜೀಸ್ 2022ರ ನವೆಂಬರ್ ತಿಂಗಳಲ್ಲಿ 745 ರೂ ಷೇರುಬೆಲೆ ಹೊಂದಿತ್ತು. ಚಂದ್ರಯಾನ-3 ಯಶಸ್ವಿಯಾದ ಬಳಿಕ ಅದರ ಷೇರುಗಳಿಗೆ ಬೇಡಿಕೆ ಹೆಚ್ಚಾಗತೊಡಗಿದ್ದು, 2023ರ ಆಗಸ್ಟ್ನಲ್ಲಿ 1,719 ರೂ ಇದ್ದ ಅದರ ಷೇರುಬೆಲೆ 2024ರ ಏಪ್ರಿಲ್ ತಿಂಗಳಲ್ಲಿ 2,800 ರೂ ಮೈಲಿಗಲ್ಲು ದಾಟಿದೆ.* ಕೇನಸ್ ಟೆಕ್ನಾಲಜೀಸ್ನ ಮಾರುಕಟ್ಟೆ ಮೌಲ್ಯ 17,000 ಕೋಟಿ ರೂ ಇದೆ. ಈ ಕಂಪನಿಯಲ್ಲಿ ರಮೇಶ್ ಕುನ್ಹಿಕಣ್ಣನ್ ಅವರು ವೈಯಕ್ತಿಕವಾಗಿ ಶೇ. 64ರಷ್ಟು ಷೇರುಪಾಲು ಹೊಂದಿದ್ದಾರೆ. ಈ ಆಧಾರದಲ್ಲಿ ಅವರ ಆಸ್ತಿಮೌಲ್ಯ 1 ಬಿಲಿಯನ್ ಡಾಲರ್ಗಿಂತಲೂ ಹೆಚ್ಚಾಗಿದೆ.