* ಉತ್ತರ ಪ್ರದೇಶದ ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಲಿರುವ ಭಕ್ತರು ಮುಂದಿನ ದಿನಗಳಲ್ಲಿ, ರಾಮನ 14 ವರ್ಷದ ವನವಾಸ ಕುರಿತು ವಿವರಿಸುವ 'ಆಧ್ಯಾತ್ಮ ವನ'ವನ್ನು ಕಣ್ಣುಂಬಿಕೊಳ್ಳಬಹುದು.* ಅಯೋಧ್ಯೆ ಯೋಜನೆಯ ಭಾಗವಾಗಿ ಸರಯೂ ನದಿಯ ದಂಡೆಯಲ್ಲಿ ರಾಮನ ವ್ಯಕ್ತಿತ್ವ ಸಾರುವ ತೆರೆದ ವಸ್ತುಸಂಗ್ರಹಾಲಯ ಒಳಗೊಳ್ಳುವ ಉದ್ಯಾನವನ್ನು ನಿರ್ಮಿಸಲು ನಿರ್ಧರಿಸಲಾಗಿದೆ.* ಅಯೋಧ್ಯೆ ಮರು ಅಭಿವೃದ್ಧಿ ಪ್ರಾಜೆಕ್ಟ್‌ನ ಮಾಸ್ಟರ್ ಪ್ಲಾನರ್ ದೀಕ್ಷು ಕುಕರೇಜಾ ಅವರು, 'ರಾಮ, ರಾಮಾಯಣ, ಅಯೋಧ್ಯೆ ಮತ್ತು ಸರಯೂ ನದಿಯು ಹಿಂದೂ ಧರ್ಮದ ಬಹುಮುಖ್ಯ ಭಾಗವಾಗಿವೆ. ಇದರ ಭಾಗವಾಗಿಯೇ ಶ್ರೀರಾಮ ವನವಾಸಕ್ಕೆ ಹೋದ 14 ವರ್ಷಗಳನ್ನು ಚಿತ್ರಿಸುವ ಅಂಶಗಳನ್ನು ಒಳಗೊಂಡ ಪರಿಸರ ಸ್ನೇಹಿ ಉದ್ಯಾನವನ್ನು ಸರಯು ನದಿಯ ದಂಡೆ ಮೇಲೆ ನಿರ್ಮಿಸಲಾಗು ತ್ತದೆ' ಎಂದಿದ್ದಾರೆ.* ಅಯೋಧ್ಯೆಗೆ ಹೋಗ ಬಯಸುವ ಜನರಿಗೆ ವಾರ್ಷಿಕ ಉಚಿತ ರೈಲು ಯಾತ್ರೆ ಯೋಜನೆಗೆ ಬಿಜೆಪಿ ನೇತೃತ್ವದ ಛತ್ತೀಸಗಢ ಸರ್ಕಾರ ಅನುಮೋದನೆ ನೀಡಿದೆ.* ರಾಮ ಮಂದಿರ ಪ್ರತಿಷ್ಟಾಪನೆ ಸಂಭ್ರಮದ ಹಲವು ಕಾರ್ಯಕ್ರಮಗಳು :- ರಾಮಮಂದಿರ ಉದ್ಘಾಟನೆಯಾಗಲಿರುವ ಇದೇ 22ರಂದು 84 ಗಂಗಾ ಸ್ನಾನ ಘಟ್ಟಗಳಿಗೆ ಭಕ್ತರು ಮತ್ತು ಪ್ರವಾಸಿಗರಿಗೆ ಉಚಿತ ಸೇವೆ ನೀಡಲು ನಿರ್ಧರಿಸಿರುವುದಾಗಿ ವಾರಾಣಸಿಯ ಮಾ ಗಂಗಾ ನಿಶಾದ್ ರಾಜ್ ಸೇವಾ ಟ್ರಸ್ಟ್ ಕಾರ್ಯದರ್ಶಿ ಶಂಭು ಸಾಹ್ನಿ ತಿಳಿಸಿದ್ದಾರೆ.- ರಾಮ ಮಂದಿರ ಉದ್ಘಾಟನೆಯಾಗಲಿರುವ ಜನವರಿ 22ರಂದು ರಾಜಸ್ಥಾನದ ಜೈಪುರವು ದೀಪಾವಳಿಯಂತೆ ಬೆಳಗಲಿದೆ. ಕನಿಷ್ಠ 5 ಲಕ್ಷ ದೀಪದ ಹಣತೆಗಳನ್ನು ಹಚ್ಚಿ, ಬೆಳಗಲಾಗುವುದು ಎಂದು ಮೇಯರ್ ಡಾ. ಸೌಮ್ಯಾ ಗುಜ್ಜ‌ರ್ ತಿಳಿಸಿದ್ದಾರೆ.- ರಾಷ್ಟ್ರ ರಾಜಧಾನಿ ದೆಹಲಿಯ ವಿವಿಧ ವಸತಿ ಕ್ಷೇಮಾಭಿವೃದ್ಧಿ ಸಂಘಟನೆಗಳು ಹಣತೆ ಬೆಳಗುವುದು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಿವೆ.- 4.31 ಕೋಟಿ ಬಾರಿ 'ರಾಮ' ನಾಮ ಬರೆದ ಕಾಗದಗಳನ್ನು ಮಧ್ಯಪ್ರದೇಶದ ಛಂದ್ವಾರದಿಂದ ಅಯೋಧ್ಯೆಗೆ ಎರಡು ಬಸ್‌ಗಳಲ್ಲಿ ಕಳುಹಿಸಿಕೊಡಲಾಗುತ್ತದೆ ಎಂದು ಕಾಂಗ್ರೆಸ್ ಸಂಸದ ನಕುಲ್ ನಾಥ್ ಗುರುವಾರ ತಿಳಿಸಿದ್ದಾರೆ. ಬುಧವಾರ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್ ಮತ್ತು ಅವರ ಪುತ್ರ ನಕುಲ್‌ನಾಥ್ ಅವರು 108 ಸಲ ರಾಮ ನಾಮವನ್ನು ಬರೆದಿದ್ದರು.- ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯಾಗುವ ದಿನದಂದು ಅಯೋಧ್ಯೆ ವಿಮಾನ ನಿಲ್ದಾಣಕ್ಕೆ 100 ಚಾರ್ಟಡ್್ರ ವಿಮಾನಗಳು ಬರಲಿವೆ. ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.- 22ರಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ರಾಜ್ಯದಾದ್ಯಂತ ಹಮ್ಮಿಕೊಂಡಿರುವ ಸ್ವಚ್ಛತಾ ಅಭಿಯಾನಕ್ಕೆ ಅಯೋಧ್ಯೆಯಿಂದ ಚಾಲನೆ ನೀಡಲಿದ್ದಾರೆ.