* ಭಾರತವು ಈ ತಿಂಗಳು ರಷ್ಯಾದಿಂದ ಅತ್ಯಧಿಕ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವ ಮೂಲಕ ಯುರೋಪ್‌ಗೆ ಸಂಸ್ಕರಿತ ಇಂಧನ ಪೂರೈಕೆಯಲ್ಲಿ ಭಾರತವು ಅಗ್ರ ಸ್ಥಾನ ಗಳಿಸಿದ್ದು, ಸಂಸ್ಕರಿತ ಇಂಧನ ಪೂರೈಕೆಯ ಬಗ್ಗೆ ಅಂಕಿ - ಅಂಶಗಳ ಪರಿಶೀಲನಾ ಸಂಸ್ಥೆ ಕೆಪ್ಲರ್‌ ತಯಾರಿಸಿರುವ 2022 - 23ನೇ ಸಾಲಿನ ವರದಿಯು ತಿಳಿಸಿದೆ* ಭಾರತದಿಂದ ಯೂರೋಪ್ ಆಮದು ಮಾಡಿಕೊಳ್ಳುತ್ತಿರುವ ಸಂಸ್ಕರಿತ ಇಂಧನ ಪೂರೈಕೆ ಪ್ರಮಾಣ 3.60 ಲಕ್ಷ ಬ್ಯಾರಲ್ ಗಳಾಗಿದ್ದು, ಏಪ್ರಿಲ್ ನಲ್ಲಿ ಭಾರತದಿಂದ  ಯೂರೋಪ್ ಸಂಸ್ಕರಿತ ಇಂಧನವನ್ನು ಗರಿಷ್ಠ 20 ಲಕ್ಷ ಬ್ಯಾರಲ್ ಪ್ರಮಾಣದಷ್ಟು ಆಮದು ಮಾಡಿಕೊಂಡಿದೆ.