* ಖ್ಯಾತ ಹಿಂದೂಸ್ತಾನಿ ಸಂಗೀತ ಗಾಯಕ 55 ವರ್ಷ ವಯಸ್ಸಿನ ಉಸ್ತಾದ್ ರಶೀದ್ ಖಾನ್ ಅವರು ಪ್ರಾಸ್ಟೇಟ್ ಕ್ಯಾನ್ಸರ್ ನಿಂದಾಗಿ ನಗರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉಸ್ತಾದ್ ರಶೀದ್ ಖಾನ್ ಅವರು ಜನವರಿ 09 ರಂದು ನಿಧನರಾಗಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಿಳಿಸಿದ್ದಾರೆ. * ಉತ್ತರ ಪ್ರದೇಶದ ಬಡಯುನ್ ನಲ್ಲಿ 1968ರ ಜುಲೈ 1 ರಂದು ಜನಿಸಿದ್ದ ಉಸ್ತಾದ್ ರಶೀದ್ ಖಾನ್ ಅವರು ಹಿಂದೂಸ್ತಾನಿ ಸಂಗೀತ ಸಂಪ್ರದಾಯದ ಶಾಸ್ತ್ರೀಯ ಸಂಗೀತಗಾರರಾಗಿದ್ದರು. 2006 ರಲ್ಲಿ ಪದ್ಮಶ್ರೀ ಪ್ರಶಸ್ತಿ ಹಾಗೂ 2022ರಲ್ಲಿ ಕೇಂದ್ರ ಸರ್ಕಾರ ಅವರು ಸಂಗೀತ ಕ್ಷೇತ್ರದಲ್ಲಿ ಸಲ್ಲಿಸಿರುವ ಕೊಡುಗೆಯನ್ನು ಪರಿಗಣಿಸಿ ದೇಶದ ಮೂರನೇ ಅತ್ಯುನ್ನತ ನಾಗರಿಕ ಪುರಸ್ಕಾರವಾದ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು.* ಶಾಂತ ಸಾಗರದಂತಹ ಅಲಾಪ್ ಅತಿ ವೇಗದ ತಾನ್, ತುಮರಿಯ ಸೊಗಸು, ಮನಸೂರೆಗೊಳ್ಳುವ ರಸಾನುಭವ ಸೃಷ್ಟಿಸುತ್ತಿದ್ದರು. ಗಾಯನದೊಳಗೆ ಕಿರಾಣಾ ಶೈಲಿ ಸೇರಿದಂತೆ ಹಲವು ಘರಾಣೆಗಳನ್ನು ನುಡಿಸುತ್ತಿದ್ದರು. ಸಣ್ಣ ವಯಸ್ಸಿನಲ್ಲೇ ಭೀಮಸೇನ ಜೋಶಿ ಅವರಿಂದ 'ಮುಂದಿನ ತಲೆಮಾರಿನ ಭಾರತೀಯ ಸಂಗೀತದ ಭರವಸೆ ಎನಿಸಿಕೊಂಡಿದ್ದ ರಶೀದ್ ಉಸ್ತಾದ ಖಾನ್ ಅವರು ಅದ್ಬುತ ಪ್ರತಿಭೆಯಾಗಿದ್ದರು.