* 1901ರಿಂದೀಚೆಗೆ ಭಾರತದ ಇತಿಹಾಸದಲ್ಲಿ 2023 ನೇ ಸಾಲಿನಲ್ಲಿ ಅತಿ ಹೆಚ್ಚು ತಾಪಮಾನದ ವರ್ಷವಾಗಿ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. * ಭಾರತದ ವಾರ್ಷಿಕ ಸರಾಸರಿ ಭೂ ಮೇಲ್ಮೈ ಗಾಳಿಯ ಉಷ್ಣತೆಯು 1981ರಿಂದ 2010ರ ಅವಧಿಯ ದೀರ್ಘಾವಧಿಯ ಸರಾಸರಿಗಿಂತ ಸರಾಸರಿ 0.65°Cಗಿಂತ ಹೆಚ್ಚಾಗಿದ್ದು, 2016ರಲ್ಲಿ ದಾಖಲಾದ 0.71°Cಗಿಂತ ಸ್ವಲ್ಪ ಕಡಿಮೆಯಾಗಿದೆ.* 2023ನೆಯ ಇಸವಿಯಲ್ಲಿ ವಿಶ್ವದ ಸರಾಸರಿ ತಾಪಮಾನವು 14.98 ಡಿಗ್ರಿ ಸೆಲ್ಸಿಯಸ್ ಆಗಿತ್ತು. 1991ರಿಂದ 2020 ರ ವರೆಗೆ ಸರಾಸರಿ ತಾಪಮಾನಕ್ಕಿಂತ 0.6 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚು. ಹಾಗೂ ಈ ಹಿಂದಿನ ಅತ್ಯಂತ ಹೆಚ್ಚಿನ ತಾಪಮಾನದ ವರ್ಷ ಎಂದು ಪರಿಗಣಿತ- ವಾಗಿದ್ದ 2016ನೆಯ ಇಸವಿಯ ಸರಾಸರಿ ತಾಪಮಾನಕ್ಕಿಂತ 0.17 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚು.* 2023ರಲ್ಲಿ ತಾಪಮಾನವು ಕಳೆದ ಒಂದು ಲಕ್ಷ ವರ್ಷಗಳ ಯಾವುದೇ ಕಾಲಘಟ್ಟದ ತಾಪಮಾನಕ್ಕಿಂತ ಹೆಚ್ಚಾಗಿದ್ದ ಸಾಧ್ಯತೆ ಇದೆ' ಎಂದು ಐರೋಪ್ಯ ಮಧ್ಯಮ ಅವಧಿ ಹವಾಮಾನ ಮುನ್ಸೂಚನೆ ಕೇಂದ್ರದ ಕೋಪರ್ನಿಕಸ್ ಹವಾಮಾನ ಬದಲಾವಣೆ ಸೇವೆ ವಿಭಾಗದ ಉಪ ಮುಖ್ಯಸ್ಥೆ ಸಮಂತಾ ಬರ್ಗಸ್ ಅವರು ತಿಳಿಸಿದ್ದಾರೆ.* ನವೆಂಬರ್‌ನಲ್ಲಿ ಬಿಡುಗಡೆಯಾದ ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ಜಾಗತಿಕ ಹವಾಮಾನದ ತಾತ್ಕಾಲಿಕ ಸ್ಥಿತಿಯು 2023ರಲ್ಲಿ ದಾಖಲೆಯ ಅತಿ ಹೆಚ್ಚು ತಾಪಮಾನವಾಗಿದೆ ಎಂದು ಅಂದಾಜಿಸಿದೆ.* 2023ರಲ್ಲಿ ಯುರೋಪ್, ಅಮೆರಿಕ ಮತ್ತು ಚೀನಾದಲ್ಲಿ ಹಿಂದೆಂದೂ ಕಾಣದಂತಹ ಬಿಸಿಗಾಳಿ ಸೃಷ್ಟಿಯಾಗಿತ್ತು, ಅಸ್ಟ್ರೇಲಿಯಾ ಹಾಗೂ ದಕ್ಷಿಣ ಅಮೆರಿಕದಲ್ಲಿ ಚಳಿಗಾಲದಲ್ಲಿ ತಾಪಮಾನವು ದಾಖಲೆಯ ಮಟ್ಟಕ್ಕೆ ಹೆಚ್ಚಾಗಿತ್ತು.