* ಜರ್ಮನಿಯ ದಿಗ್ಗಜ ಫುಟ್‌ಬಾಲ್ ಆಟಗಾರ, ವಿಶ್ವಕಪ್ ವಿಜೇತ, ನಾಯಕ ಮತ್ತು ಕೋಚ್ ಫ್ರಾಂಜ್ ಬೆಕೆನ್‌ಬಾರ್ (78) ಅವರು 2024 ಜನವರಿ 7 ರಂದು ನಿಧನರಾಗಿದ್ದಾರೆ. * 1974 ರಲ್ಲಿ ಜರ್ಮನಿಯಲ್ಲಿ ನಡೆದ ವಿಶ್ವಕಪ್‌ನಲ್ಲಿ ಪಶ್ಚಿಮ ಜರ್ಮನಿ ಚಾಂಪಿಯನ್ ಆಗಿದ್ದಾಗ ಅವರು ತಂಡದ ನಾಯಕರಾಗಿದ್ದರು. 1990ರಲ್ಲಿ ಇಟಲಿಯಲ್ಲಿ ನಡೆದ ವಿಶ್ವ- ಕಪ್‌ನಲ್ಲಿ ತಂಡ ಗೆದ್ದಾಗ ಮ್ಯಾನೇಜರ್ ಆಗಿ ತರಬೇತಿಯ ಹೊಣೆ ಹೊತ್ತಿದ್ದರು. * ಫ್ರಾಂಜ್ ಬೆಕೆನ್ ಬಾರ್ ಅವರು 'ಕೈಸರ್' (ಸಾಮ್ರಾಟ) ಎಂದು ಹೆಸರು ಪಡೆದಿದ್ದರು. * 1972 ಮತ್ತು 1976ರಲ್ಲಿ ಫ್ರಾಂಜ್ ಅವರು ಯುರೋಪಿನ ವರ್ಷದ ಫುಟ್‌ಬಾಲ್ ಆಟಗಾರ ಗೌರವಕ್ಕೆ ಪಾತ್ರರಾಗಿದ್ದರು.* ವಿಶ್ವ ಫುಟ್‌ಬಾಲ್ ಸಂಸ್ಥೆ (ಫೀಫಾ) ಅಧ್ಯಕ್ಷ ಗಿಯಾನಿ ಇನ್ನಾಂಟಿನೊ ಅವರು ಬೆಕೆನ್‌ಬಾರ್ ಅವರನ್ನು 'ನೈಜ ದಂತಕತೆ' ಎಂದು ಬಣ್ಣಿಸಿದ್ದಾರೆ.*  ಫ್ರಾಂಜ್ ಅವರ ತರಬೇತಿಯಲ್ಲಿ 1990 ರಲ್ಲಿ ಇಟಲಿಯಲ್ಲಿ ನಡೆದ ವಿಶ್ವಕಪ್ ನಲ್ಲಿ ಪಶ್ಚಿಮ ಜರ್ಮನಿ ತಂಡ ಫೈನಲ್‌ನಲ್ಲಿ 1-0ಯಿಂದ ಅರ್ಜೆಂಟೀನಾ ತಂಡವನ್ನು ಸೋಲಿಸಿತ್ತು.