* ಭಾರತದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕೇಂದ್ರ ಸರ್ಕಾರದ 'ಸ್ಕಿಲ್ ಇಂಡಿಯಾ ಯೋಜನೆ'ಯಡಿ ಕರ್ನಾಟಕದಲ್ಲಿ ಪರಿಸರ ಸಂಬಂಧಿ ಕೋರ್ಸವೊಂದನ್ನು ಆರಂಭಿಸಲಾಗಿದೆ.* ಕೇಂದ್ರ ಸರ್ಕಾರವು ಪ್ರಮಾಣೀಕರಿಸಿದ 16 ಕೌಶಲ ಕೋರ್ಸಗಳಲ್ಲಿ ಪರಿಸರ ಸಂಬಂಧಿ ಕೋರ್ಸ್ ಒಂದಾಗಿದೆ.* ಸರ್ಕಾರಿ ಏಜನ್ಸಿಗಳು, ನಿವೃತ್ತ ಭಾರತೀಯ ಅರಣ್ಯ ಸೇವೆ (ISF) ಅಧಿಕಾರಿಗಳು ಹಾಗೂ ತರಬೇತಿ ಮುಗಿಸಿ ಸೇವೆ ಸಲ್ಲಿಸುತ್ತಿರುವವರು ಈ ಪರಿಸರಕ್ಕೆ ಸಂಬಂದಿಸಿದ ತರಬೇತಿಯನ್ನು ನೀಡಲಿದ್ದಾರೆ.* ಈ ಕೋರ್ಸ್ ಒಂದು ತಿಂಗಳ ತರಬೇತಿಯದಾಗಿದ್ದು, ಈ ತರಬೇತಿಯಲ್ಲಿ ಕೀಟಗಳು, ಚಿಟ್ಟೆಗಳು, ಮಣ್ಣು, ಸಸ್ಯ, ಮತ್ತು ಪ್ರಾಣಿಗಳು, ವನ್ಯಜೀವಿ ವಿವರಗಳನ್ನು ಒಳಗೊಂಡಂತೆ ಪ್ರಕೃತಿಯ ಅಂಶಗಳನ್ನು ಕಲಿಸಿಕೊಡಲಾಗುತ್ತದೆ. ಇದರಿಂದ ಗ್ರಾಮೀಣ ಭಾಗದ ಯುವಜನತೆಗೆ ಅನುಕೂಲವಾಗಲಿದೆ.