* ಟೆನಿಸ್  ಲೋಕದ ದಿಗ್ಗಜ, ದಾಖಲೆಯ 24 ಗ್ರ್ಯಾಂಡ್ ಸ್ಲಾಮ್ ಒಡೆಯ ಸರ್ಬಿಯಾದ ನೊವಾಕ್ ಜೊಕೊವಿಕ್ ಎಟಿಪಿ ರ‍್ಯಾಂಕಿಂಗ್ ನಲ್ಲೂ ದಾಖಲೆ ಸೃಷ್ಟಿಸಿದ್ದಾರೆ. ವಿಶ್ವದ ನಂ.1 ಟೆನಿಸ್ಸಿಗನಾಗಿ 419 ವಾರಗಳನ್ನು ಪೂರೈಸಿರುವ ಅವರು, ವಿಶ್ವದ ಅತಿ ಹಿರಿಯ ಆಟಗಾರ [ಅತ್ಯಂತ ಹಳೆಯ ವಿಶ್ವ ನಂ.1]  ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. * 36 ವರ್ಷ 321 ದಿನದ ನೊವಾಕ್  ಎಟಿಪಿ ರ್ಯಾಂಕಿಂಗ್ ನಲ್ಲಿ ವಿಶ್ವ ನಂಬರ್  01 ಸ್ಥಾನದಲ್ಲಿದ್ದಾರೆ. ಟೆನಿಸ್  ಲೋಕದಲ್ಲಿ ಅಚ್ಚಳಿಯದ ಸಾಧನೆ ತೋರಿರುವ ಆಟಗಾರ, ಸ್ವಿಸ್ ನ ರೋಜರ್  ಫೆಡರರ್ ದಾಖಲೆಯನ್ನು ಮುರಿದಿದ್ದಾರೆ. * ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಜೊಕೊವಿಕ್ 2011 ರಲ್ಲಿ ತಮ್ಮ 24ನೇ ವಯಸ್ಸಿನಲ್ಲಿ ವಿಶ್ವ ನಂ.1 ಆಗಿ ಹೊರಹೊಮ್ಮಿದ್ದರು. 'ಬಿಗ್ 3' ಸ್ಪರ್ಧಿಗಳ ಪೈಕಿ ರೋಜರ್  ಫೆಡರರ್ ಮತ್ತು ರಾಫೆಲ್ ನಡಾಲ್ ಅವರು 22ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಅಗ್ರಸ್ಥಾನಿಗಳಾಗಿದ್ದರು.