* ''ಫಾತಿಮಾ ವಾಸಿಮ್'' ಅವರು ಉತ್ತರ ಭಾರತದ ಸಿಯಾಚಿನ್ ಗ್ಲೇಸಿಯರ್‌ನ 15 ಸಾವಿರ ಅಡಿ ಎತ್ತರದಲ್ಲಿ ಕಾರ್ಯಾಚರಣಾ ಪೋಸ್ಟ್‌ಗೆ ನಿಯೋಜನೆಗೊಂಡ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. * ಸಿಯಾಚಿನ್ ಗ್ಲೇಸಿಯರ್ ಅನ್ನು ವಿಶ್ವದ ಅತಿ ಎತ್ತರದ ಯುದ್ಧ ತಾಣವೆಂದು ಕರೆಯಲಾಗುತ್ತದೆ. ಮತ್ತು ಇಂಡೋ-ಪಾಕ್ ನಿಯಂತ್ರಣ ರೇಖೆಯ ಸಮೀಪದಲ್ಲಿದೆ. ಇದರ ಎತ್ತರ 20,062 ಅಡಿ. ಭಾರತದ ಅತಿದೊಡ್ಡ ಮತ್ತು ವಿಶ್ವದ ಎರಡನೇ ಅತಿದೊಡ್ಡ ಹಿಮನದಿ ಇಲ್ಲಿ ಹರಿಯುತ್ತದೆ.* ಫಾತಿಮಾ ಅವರನ್ನು 15,200 ಅಡಿ ಎತ್ತರದಲ್ಲಿ ನಿಯೋಜಿಸಲಾಗಿದೆ. ಎಂದು ಭಾರತೀಯ ಸೇನೆಯ ಫೈರ್ ಅಂಡ್ ಫ್ಯೂರಿ ಕಾರ್ಪ್ಸ್ ಹೇಳಿದೆ.* ಕ್ಯಾಪ್ಟನ್ ಫಾತಿಮಾ ವಾಸಿಂ ಸಿಯಾಚಿನ್ ಬ್ಯಾಟಲ್ ಸ್ಕೂಲ್‌ನಲ್ಲಿ ತರಬೇತಿ ಪಡೆದಿದ್ದಾರೆ. ಸಿಯಾಚಿನ್ ಬ್ಯಾಟಲ್ ಸ್ಕೊ ಇಂಡಕ್ಷನ್ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಅವರನ್ನು ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್‌ನಲ್ಲಿ ನಿಯೋಜಿಸಲಾಗಿದೆ.