* ಜೀತ ಪದ್ಧತಿ : ಇದು ಒಂದು ಬಲಾತ್ಕಾರದ ದುಡಿಮೆಯ ಪದ್ಧತಿ, ಪಡೆದ ಸಾಲಕ್ಕೆ ಪ್ರತಿಯಾಗಿ ಸಾಲ ನೀಡಿದವರ ಮನೆಯಲ್ಲಿ ಅನಿರ್ದಿಷ್ಟಾವಧಿಯವರೆಗೆ ದುಡಿಯುವುದು. ಕೆಳವರ್ಗದ ರೈತರು ಮೇಲ್ವರ್ಗದ ರೈತರ ಬಳಿ ಮಾಡುವ ಸಾಲಕ್ಕೆ ಅವರ ತೋಟ ಹೊಲ ಮನೆಗಳಲ್ಲಿ ದುಡಿಯುತ್ತಾರೆ.   * 1970ರ ದಶಕದಲ್ಲಿ ಜೀತ ಪದ್ಧತಿ ಭಾರತದಲ್ಲಿ ಅತಿಯಾಗಿ ವ್ಯಾಪಿಸಿತ್ತು.  ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರಕಾರ 1976 ಅಕ್ಟೋಬರ್ 25ರಂದು 'ಜೀತ ಪದ್ಧತಿ ನಿರ್ಮೂಲನೆ ಕಾಯಿದೆ-1976' ಅನ್ನು ಜಾರಿಗೆ ತಂದಿತು.* 1976 ರಿಂದ ಯಾರಾದರೂ ಜೀತ ಪದ್ಧತಿಯಡಿ ಸಾಲ ಕೊಡುವದು, ಯಾರನ್ನಾದರೂ ಜೀತದಾಳನ್ನಾಗಿ ನೇಮಿಸಿಕೊಳ್ಳುವುದು ಮಾಡಿದರೆ ಈ ಜೀತ ಪದ್ಧತಿ ನಿರ್ಮೂಲನೆ ಕಾಯಿದೆ-1976  ಕಾಯಿದೆಯಡಿ ಸೆರೆಮನೆವಾಸ ಮತ್ತು ದಂಡವನ್ನು ವಿಧಿಸುವ ಅವಕಾಶವಿದೆ.* ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಸೆಕ್ಷನ್ 58(ಎ) ಪ್ರಕಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವ ಯಾವುದೇ ಜೀತಪದ್ಧತಿಯನ್ನು ಜಿಲ್ಲಾಧಿಕಾರಿ ಅಥವಾ ಸರಕಾರ ನಿಗದಿಪಡಿಸಿದ ಯಾವುದೇ ಅಧಿಕಾರಿಗಳಿಗೆವರದಿ ಮಾಡುವುದು ಗ್ರಾಮ ಪಂಚಾಯಿತಿಗಳ  ಕಾರ್ಯವಾಗಿದೆ.* 2016ರ ಜಾಗತಿಕ ಜೀತಪದ್ಧತಿ ಸೂಚ್ಯಂಕದಲ್ಲಿ ಭಾರತವು ನಾಲ್ಕನೇ ಸ್ಥಾನದಲ್ಲಿದೆ. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು 2009ರಲ್ಲಿ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಸುಮಾರು 3 ಲಕ್ಷ ಜೀತ ಕಾರ್ಮಿಕರಿದ್ದಾರೆ.