Job Description: ➤ ಕರ್ನಾಟಕ ರಾಜ್ಯ ಮುಖ್ಯ ಚುನಾವಣಾಧಿಕಾರಿ (CEO) ಕಚೇರಿಯು ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision - SIR) ಅಂಗವಾಗಿ ಹೊಸ ಕರಡು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ.➤ ಕರಡು ಮತದಾರರ ಪಟ್ಟಿಯ ಪ್ರಮುಖ ಅಂಕಿ-ಅಂಶಗಳು: ಒಟ್ಟು ಕರಡು ಮತದಾರರ ಸಂಖ್ಯೆ: 4.46 ಕೋಟಿ (SIR ಆರಂಭಕ್ಕೂ ಮುನ್ನ ರಾಜ್ಯದಲ್ಲಿ ಒಟ್ಟು 5.54 ಕೋಟಿ ಮತದಾರರಿದ್ದರು). ಪುರುಷ ಮತದಾರರು: 2.22 ಕೋಟಿ ಮಹಿಳಾ ಮತದಾರರು: 2.24 ಕೋಟಿ ಪಟ್ಟಿಯಿಂದ ಹೊರಗುಳಿದವರು (ASDDO ವರ್ಗ): 1.08 ಕೋಟಿ ಮತದಾರರು (ಅಬ್ಸೆಂಟ್, ಶಿಫ್ಟೆಡ್, ಡೆಡ್, ಡುಪ್ಲಿಕೇಟ್, ಆಬ್ಜೆಕ್ಷನ್ - ASDDO ಪಟ್ಟಿಯಲ್ಲಿದ್ದಾರೆ). ನೋಟಿಸ್ ಸ್ವೀಕರಿಸಲಿರುವ ಮತದಾರರು (ಒಟ್ಟು 43.81 ಲಕ್ಷ): ಮಾಹಿತಿ ವ್ಯತ್ಯಾಸವಿರುವವರು: 20.35 ಲಕ್ಷ 2002ರ ಮ್ಯಾಪಿಂಗ್ ವಿವರ ಇಲ್ಲದಿರುವವರು: 23.45 ಲಕ್ಷ ಅಧಿಕೃತ ಜಾಲತಾಣ: ಕರಡು ಪಟ್ಟಿಯನ್ನು CEO ಕರ್ನಾಟಕದ ಅಧಿಕೃತ ವೆಬ್‌ಸೈಟ್ ceokarnataka.gov.in ನಲ್ಲಿ ಮಾತ್ರ ಪ್ರಕಟಿಸಲಾಗಿದೆ. ➤ ಪರಿಶೀಲನೆ ಮತ್ತು ಹೊಸ ನೋಂದಣಿ ಪ್ರಕ್ರಿಯೆ: ಫಾರ್ಮ್-6 (Form-6): ಕರಡು ಪಟ್ಟಿಯಲ್ಲಿ ಹೆಸರಿಲ್ಲದ ಅರ್ಹ ಮತದಾರರು ಹೊಸದಾಗಿ ನೋಂದಾಯಿಸಿಕೊಳ್ಳಲು ಅರ್ಜಿ ಸಂಖ್ಯೆ-6 ನ್ನು ಸಲ್ಲಿಸಬೇಕು. ನೋಟಿಸ್ ಪ್ರಕ್ರಿಯೆ: ಮಾಹಿತಿ ವ್ಯತ್ಯಾಸವಿರುವ ಮತದಾರರಿಗೆ ನೋಟಿಸ್‌ ನೀಡಲಾಗುತ್ತದೆ. ನೋಟಿಸ್‌ಗೆ ಉತ್ತರಿಸಲು 7 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಅಂತಿಮ ಪ್ರಕ್ರಿಯೆಯ ಸಮಯ: ನೋಟಿಸ್ ಜಾರಿ, ವಿಚಾರಣೆ ಹಾಗೂ ಅಂತಿಮ ಪಟ್ಟಿ ಪ್ರಕಟಣೆಗೆ ಅಕ್ಟೋಬರ್ 22 ರವರೆಗೆ ಒಟ್ಟು 58 ದಿನಗಳ ಕಾಲಾವಕಾಶವಿದೆ. ಅಧಿಕಾರಿಗಳ ಜವಾಬ್ದಾರಿ: ಮತದಾರರ ನೋಂದಣಾಧಿಕಾರಿಗಳು (ERO) ವಿಚಾರಣೆ ನಡೆಸುವ ಅಧಿಕಾರ ಹೊಂದಿದ್ದು, ಸಹಾಯಕ ಮತದಾರರ ನೋಂದಣಾಧಿಕಾರಿಗಳ (AERO) ಮೂಲಕ ಕಾರ್ಯನಿರ್ವಹಿಸುತ್ತಾರೆ.