* ಭಾಷೆ, ನಾಗರಿಕತೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವ ಮತ್ತು ನಿರ್ವಹಿಸುವ ಉದ್ದೇಶದಿಂದ ಸಿಂಗಾಪುರದಲ್ಲಿ ತಿರುವಳ್ಳುವರ್ ಸಾಂಸ್ಕೃತಿಕ ಕೇಂದ್ರವನ್ನು ಸ್ಥಾಪಿಸುವುದಾಗಿ ಮೋದಿ ಘೋಷಿಸಿದ್ದಾರೆ.* ಸಿಂಗಾಪುರ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಉಭಯ ದೇಶಗಳ ಸಾಂಸ್ಕೃತಿಕ ಬಾಂಧವ್ಯ ಇನ್ನಷ್ಟು ವೃದ್ಧಿ ಯಾಗಬೇಕೆ೦ದು ಅಭಿಪ್ರಾಯಪಟ್ಟಿದ್ದಾರೆ.* ಸಿಂಗಾಪುರ ಪ್ರಧಾನಿ ಲಾರೆನ್ಸ್ ವಾಂಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಉಭಯ ದೇಶಗಳ ನಾಯಕರು ಹಲವುಅತ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಇವುಗಳಲ್ಲಿ ಸೆಮಿಕಂಡಕ್ಟರ್, ಡಿಜಿಟಲ್ ತಂತ್ರಜ್ಞಾನ, ಕೌಶಲ್ಯ ಅಭಿವೃದ್ಧಿ ಮತ್ತು ಆರೋಗ್ಯ ರಕ್ಷಣೆಯಲ್ಲಿ ಸಹಕಾರದ ಒಪ್ಪಂದಗಳು ಪ್ರಮುಖವಾದವು.* ಇದೇ ವೇಳೆ, ತಿರುವಳ್ಳುವ‌ರ್ ಸಾಂಸ್ಕೃತಿಕ ಕೇಂದ್ರ ಸ್ಥಾಪಿಸುವ ಮೋದಿ ಅವರ ನಿರ್ಧಾರವನ್ನು ಶ್ಲಾಘಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಧಾನಿಗೆ ಧನ್ಯವಾದ ತಿಳಿಸಿದ್ದಾರೆ.* ಭಾರತದ ಪ್ರಥಮ ತಿರುವಳ್ಳುವರ್ ಸಾಂಸ್ಕೃತಿಕ ಕೇಂದ್ರ ಸಿಂಗಾಪುರದಲ್ಲಿ ಆರಂಭಗೊಳ್ಳಲಿದೆ. ಮಹಾನ್ ಸಂತ ತಿರುವಳ್ಳುವರ್ ಅತೀ ಪುರಾತನ ಭಾಷೆಯಲ್ಲಿ ಪ್ರಪಂಚಕ್ಕೆ ಮಾರ್ಗದರ್ಶಿ ಚಿಂತನೆಗಳನ್ನು ನೀಡಿದ್ದಾರೆ. ಅವರು ಸುಮಾರು 2 ಸಾವಿರ ವರ್ಷಗಳ ಹಿಂದೆ ಬರೆದ `ತಿರುಕ್ಕುರಲ್'ನಲ್ಲಿ ಉಲ್ಲೇಖಿಸಿರುವ ಚಿಂತನೆಗಳು ಈಗಿನ ಕಾಲಕ್ಕೂ ಪ್ರಸ್ತುತವೆನಿಸುತ್ತದೆ ಎಂದು ಮೋದಿ ಹೇಳಿದ್ದಾರೆ.* ಮೂರರಿಂದ ನಾಲ್ಕನೇ ಶತಮಾನದಲ್ಲಿದ್ದ ತಮಿಳು ಸಾಹಿತಿ ಹಾಗೂ ತತ್ವಜ್ಞಾನಿಯಾಗಿರುವ ತಿರುವಳ್ಳುವರ್ 'ತಿರುಕ್ಕುರಳ್' ಎನ್ನುವ ಪ್ರಸಿದ್ಧ ಕೃತಿಯನ್ನು ರಚಿಸಿದ್ದಾರೆ. ಇದು ತಮಿಳು ಭಾಷೆಯ ಅತ್ಯಂತ ಪೂಜ್ಯ ಹಾಗೂ ಪ್ರಾಚೀನ ಕೃತಿಗಳಲ್ಲಿ ಒಂದಾಗಿದೆ.* ಮಹಾನ್ ಸಂತ ತಿರುವಳ್ಳುವರ್ ಅತೀ ಪುರಾತನ ಭಾಷೆಯಲ್ಲಿ ಪ್ರಪಂಚಕ್ಕೆ ಮಾರ್ಗದರ್ಶಿ ಚಿಂತನೆಗಳನ್ನು ನೀಡಿದ್ದಾರೆ. ಅವರು ಸುಮಾರು 2 ಸಾವಿರ ವರ್ಷಗಳ ಹಿಂದೆ ಬರೆದ `ತಿರುಕ್ಕುರಲ್'ನಲ್ಲಿ ಉಲ್ಲೇಖಿಸಿರುವ ಚಿಂತನೆಗಳು ಈಗಿನ ಕಾಲಕ್ಕೂ ಪ್ರಸ್ತುತವೆನಿಸುತ್ತದೆ ಎಂದು ಮೋದಿ ಹೇಳಿದ್ದಾರೆ.* 1730 ರಲ್ಲಿ ಕಾನ್ ಸ್ಟಂಟೈನ್ ಜೋಸೆಫ್ ಬೇಸ್ಚಿರವರು ಈ ತಿರುಕ್ಕುರಳ್ ಕೃತಿಯನ್ನು ಲ್ಯಾಟಿನ್ ಭಾಷೆಗೆ ಅನುವಾದಿಸಿದರು. ಇದರಿಂದ ಯುರೋಪಿಯನ್ ತತ್ವಜ್ಞಾನಿಗಳಿಗೆ ಭಾರತದ ಪ್ರಾಚೀನ ಕೃತಿಯ ಪರಿಚಯವಾಯಿತು.