Job Description: * 2023-24ನೇ ಸಾಲಿನಲ್ಲಿ ಸೆಲೆಬ್ರಿಟಿಗಳ ಪೈಕಿ ಅತಿ ಹೆಚ್ಚು ತೆರಿಗೆ ಕಟ್ಟುತ್ತಿರುವುದು ನಟ ಶಾರೂಕ್ ಖಾನ್ ಅವರು 92 ಕೋಟಿ ರೂಪಾಯಿ ತೆರಿಗೆ ಪಾವತಿಸಿದ್ದಾರೆ. * ಎರಡನೇ ಸ್ಥಾನದಲ್ಲಿ ದಳಪತಿ ವಿಜಯ್ ಅವರು 80 ಕೋಟಿ ರೂ. ತೆರಿಗೆ ಪಾವತಿಯಾಗಿದೆ. ಸಲ್ಮಾನ್ ಖಾನ್ 75 ಕೋಟಿ ರೂಪಾಯಿ, ಅಮಿತಾಭ್ ಬಚ್ಚನ್ 71 ಕೋಟಿ ಮತ್ತು ವಿರಾಟ್ ಕೊಹ್ಲಿ 66 ಕೋಟಿ ತೆರಿಗೆ ಕಟ್ಟಿ ನಂತರದ ಸ್ಥಾನಗಳಲ್ಲಿದ್ದಾರೆ. * ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ 2023-24ರ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸಿದ ಆಟಗಾರರಾಗಿದ್ದಾರೆ. ಸ್ಪೋರ್ಟ್ಸ್ ಐಕಾನ್‌ಗಳಲ್ಲಿ ಒಬ್ಬರಾಗಿರುವ ಕೊಹ್ಲಿ ಅವರು 66 ಕೋಟಿ ರೂ. ತೆರಿಗೆ ಪಾವತಿಸಿದ್ದಾರೆ ಎಂದು ವರದಿಯಾಗಿದೆ. * ಟೀಂ ಇಂಡಿಯಾದ ಮಾಜಿ ನಾಯಕ ಎಂ ಎಸ್ ಧೋನಿ ಎರಡನೇ ಅತಿ ಹೆಚ್ಚು ತೆರಿಗೆ ಪಾವತಿಸುವ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. * ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರವೂ ಐಪಿಎಲ್‌ನಲ್ಲಿ ಮುಂದುವರೆದಿದ್ದಾರೆ. ಧೋನಿ ಕ್ರಿಕೆಟ್ ಹೊರತುಪಡಿಸಿ ಜಾಹೀರಾತುಗಳಿಂದಲೂ ಹೆಚ್ಚಿನ ಆದಾಯ ಗಳಿಸುತ್ತಾರೆ. 2023-24ರ ಆರ್ಥಿಕ ವರ್ಷದಲ್ಲಿ ಧೋನಿ 38 ಕೋಟಿ ರೂ. ತೆರಿಗೆ ಪಾವತಿಸಿದ್ದಾರೆ.* ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಕ್ರಿಕೆಟ್ನಿಂದ ನಿವೃತ್ತರಾದ ನಂತರವೂ ಪ್ರಮುಖ ತೆರಿಗೆದಾರರಾಗಿ ಉಳಿದಿದ್ದಾರೆ. 2024ರ ಆರ್ಥಿಕ ವರ್ಷದಲ್ಲಿ ತೆಂಡೂಲ್ಕರ್ 28 ಕೋಟಿ ರೂಪಾಯಿ ತೆರಿಗೆ ಪಾವತಿಸಿದ್ದಾರೆ. ಅವರು ಮೂರನೇ ಅತಿ ಹೆಚ್ಚು ತೆರಿಗೆ ಪಾವತಿಸುವ ಕ್ರಿಕೆಟಿಗರಾಗಿದ್ದಾರೆ. ಜಾಹೀರಾತು ಮತ್ತು ಹೂಡಿಕೆ ಸಚಿನ್ ಅವರ ಆದಾಯ ಮೂಲವಾಗಿದೆ.* ಸೌರವ್ ಗಂಗೂಲಿ 2024ರ ಹಣಕಾಸು ವರ್ಷದಲ್ಲಿ 23 ಕೋಟಿ ರೂಪಾಯಿ ತೆರಿಗೆ ಪಾವತಿಸಿದ್ದಾರೆ. ಸದ್ಯ ಗಂಗೂಲಿ ಕಾಮೆಂಟೇಟರ್ ಮತ್ತು ಕ್ರೀಡಾ ನಿರ್ವಾಹಕರಾಗಿ ಹಾಗೂ ಜಾಹೀರಾತುಗಳ ಮೂಲಕ ಆದಾಯ ಗಳಿಸುತ್ತಿದ್ದಾರೆ.* ಆಲ್ ರೌಂಡ್ ಕೌಶಲ್ಯಕ್ಕೆ ಹೆಸರುವಾಸಿಯಾದ ಹಾರ್ದಿಕ್ ಪಾಂಡ್ಯ ಅವರು 13 ಕೋಟಿ ರೂಪಾಯಿ ತೆರಿಗೆ ಪಾವತಿಸಿ ಐದನೇ ಸ್ಥಾನದಲ್ಲಿದ್ದಾರೆ. ಮತ್ತೊಬ್ಬ ಕ್ರಿಕೆಟ್ ಆಟಗಾರ ರಿಷಬ್ ಪಂತ್ ಅವರು 10 ಕೋಟಿ ರೂ. ತೆರಿಗೆ ಪಾವತಿಸಿ ಆರನೇ ಸ್ಥಾನದಲ್ಲಿದ್ದಾರೆ.ಅಜಯ್ ದೇವಗನ್ - 42 ಕೋಟಿಎಂ.ಎಸ್.ಧೋನಿ - 38 ಕೋಟಿರಣಬೀರ್ ಕಪೂರ್ - 36 ಕೋಟಿಹೃತಿಕ್ ರೋಷನ್ - 29 ಕೋಟಿಸಚಿನ್ ತೆಂಡೂಲ್ಕರ್ - 28 ಕೋಟಿಕಪಿಲ್ ಶರ್ಮಾ - 26 ಕೋಟಿಸೌರವ್ ಗಂಗೂಲಿ - 23 ಕೋಟಿಕರೀನಾ ಕಪೂರ್ - 20 ಕೋಟಿಶಾಹಿದ್ ಕಪೂರ್ - 14 ಕೋಟಿಮೋಹನ್‌ ಲಾಲ್ - 14 ಕೋಟಿಅಲ್ಲು ಅರ್ಜುನ್ - 14 ಕೋಟಿ