* ಸ್ವಚ್ಛ ಭಾರತ ಅಭಿಯಾನವು ಜನರ ಆರೋಗ್ಯದಮೇಲೆ ಸಕಾರಾತ್ಮಕ ಬರಿಣಾಮ ಬೀರಿದ್ದು, ದೇಶದಲ್ಲಿ ಗೇಮ್ ಚಂಗೇರ್ ಆಗಿ ಕಾರ್ಯನಿರ್ವಹಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 5 ರಂದು ಹೇಳಿದ್ದಾರೆ.* ಸ್ವಚ್ಛ ಭಾರತದ ಅಭಿಯಾನದ ಮೂಲಕ ಕೈಗೊಂಡಿರುವ ನೈರ್ಮಲ್ಯ ನಿರ್ವಹಣೆಯಿಂದಾಗಿ ಜನರ ಆರೋಗ್ಯ ಗಮನಾರ್ಹವಾಗಿ ಸುಧಾರಣೆ ಯಾಗಿದೆ. ಅಭಿಯಾನದಡಿ ಕೈಗೊಂಡ  ಶೌಚಾಲಯಗಳ ನಿರ್ಮಾಣದಿಂದಾಗಿ ಶಿಶು ಮತ್ತು ಮಕ್ಕಳ ಮರಣ ಪ್ರಮಾಣ ಕಡಿಮೆಯಾಗಿದೆ ಎಂದು ಬ್ರಿಟಿಷ್ ಸಾಪ್ತಾಹಿಕ ವೈಜ್ಞಾನಿಕ ಜರ್ನಲ್ 'ನೇಚರ್'ನಲ್ಲಿ ಪ್ರಕಟವಾದ ಸ್ವಚ್ಛಭಾರತ ಮಿಷನ್ ಅಡಿಯಲ್ಲಿ ಶೌಚಾಲಯ ನಿರ್ಮಾಣ ಮತ್ತು ಭಾರತದಲ್ಲಿ ಶಿಶುಮರಣ ಕುರಿತ ಸಂಶೋಧನಾ ಪ್ರಬಂಧದ ವರದಿಯನ್ನು ಉಲ್ಲೇಖಿಸಿ ಸಂತಸ ವ್ಯಕ್ತಪಡಿಸಿದ್ದಾರೆ.* "ಸ್ವಚ್ಛ, ಸುರಕ್ಷಿತ ನೈರ್ಮಲ್ಯವು ಸಾರ್ವಜನಿಕ ಆರೋಗ್ಯಕ್ಕೆ ಆದ ಬದಲಾವಣೆಯಾಗಿದೆ. ಮತ್ತು ಭಾರತವು ಇದರಲ್ಲಿ ಮುಂದಾಳತ್ವ ವಹಿಸಿದೆ ಎಂದು ನನಗೆ ಖುಷಿಯಾಗಿದೆ" ಎಂದು ಅವರು ಹೇಳಿದರು.* ಈ ಅಭಿಯಾನವು ಅಧಿಕೃತವಾಗಿ 2 ಅಕ್ಟೋಬರ್ 2014ರಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜ್ ಘಾಟಿನಲ್ಲಿ ರಸ್ತೆಯೊಂದರನ್ನು ಗುಡಿಸುವುದರ ಮೂಲಕ ಆರಂಭಮಾಡಿದರು.* ಬಯಲು ಮುಕ್ತ ಶೌಚಾಲಯ ಹಾಗೂ ಘನ ತ್ಯಾಜ್ಯ ನಿರ್ವಹಣೆಯನ್ನು ಸುಧಾರಿಸುವ ನಿಟ್ಟಿನಲ್ಲಿ ದೇಶದಾದ್ಯಂತ ಈ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಅಂದಾಜಿನ ಪ್ರಕಾರ ಸ್ವಚ್ಛ ಭಾರತ ಸುಮಾರು 60 ಸಾವಿರದಿಂದ 70 ಸಾವಿರ ಶಿಶು ಮರಣ ತಡೆಗಟ್ಟಲು ಸಾಧ್ಯವಾಯಿತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.