* ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪ್ಯಾರಾ ಜುಡೊ ಸ್ಪರ್ಧಿ ಕಪಿಲ್ ಪರ್ಮಾರ್ ಐತಿಹಾಸಿಕ ಕಂಚಿನ ಪದಕ ಗೆದ್ದಿದ್ದಾರೆ. ಪ್ಯಾರಾಲಿಂಪಿಕ್ಸ್ ಜುಡೊ ಕ್ರೀಡೆಯ ಇತಿಹಾಸದಲ್ಲೇ ಭಾರತ ಗೆದ್ದ ಮೊದಲ ಪದಕ ಇದಾಗಿದೆ.* ಪುರುಷರ 60 ಕೆ.ಜಿ. ಜೆ1 ಜುಡೊ ಸ್ಪರ್ಧೆಯಲ್ಲಿ ಕಪಿಲ್ ಬ್ರೆಜಿಲ್‌ನ ಎಲಿಯೆಲ್ಟನ್ ಡಿ ಒಲಿವೇರಾ ಅವರನ್ನು ಮಣಿಸಿ ಐತಿಹಾಸಿಕ ಸಾಧನೆ ಮಾಡಿದರು.* ಕಪಿಲ್‌ 0-10 ಅಂಕಗಳಿಂದ ಇರಾನ್‌ ಅಥ್ಲೀಟ್‌ ಸೆಯದ್ ಮೇಸಂ ಬನಿತಾಬ ಖೋರಮ್ ಅಬಾದಿ ವಿರುದ್ಧ ಸೋಲು ಎದುರಿಸಿದರು. ಹೀಗಾಗಿ ಕಪಿಲ್‌ ಕಂಚಿನ ಪದಕದ ಹೋರಾಟದಲ್ಲಿ ಕಣಕ್ಕೆ ಇಳಿಯಬೇಕಾಯಿತು.* ಈ ಹೋರಾಟದಲ್ಲಿ ಕಪಿಲ್‌ 10-0ಯಿಂದ ಬ್ರೆಜಿಲ್‌ನ ಎಲಿಯೆಲ್ಟನ್ ಡಿ ಒಲಿವೇರಾ ಅವರನ್ನು ಮಣಿಸಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವರು ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಕೇವಲ 33 ಸೆಕೆಂಡುಗಳಲ್ಲಿ ಪಂದ್ಯವನ್ನು ಗೆದ್ದರು.* ಈ ಮೂಲಕ ಭಾರತ ಪ್ರಸಕ್ತ ಪ್ಯಾರಾಲಿಂಪಿಕ್ಸ್‌ ಕ್ರೀಡಾ ಕೂಟದಲ್ಲಿ ಪಡೆದ 25ನೇ ಪದಕವಾಗಿದೆ.* ಇಲ್ಲಿಯವರೆಗೆ ಭಾರತ 5 ಚಿನ್ನ, 9 ಬೆಳ್ಳಿ, 11 ಕಂಚು ಪಡೆದು, 14ನೇ ಸ್ಥಾನದಲ್ಲಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ 19 ಪದಕಗಳನ್ನು ಗೆದ್ದಿದ್ದತು. ಈಗ ಭಾರತ ತನ್ನ ಹಳೆಯ ದಾಖಲೆಗಳನ್ನು ಅಳಿಸಿ ಹಾಕಿದೆ.