* ಶ್ರೀಲಂಕಾದ ಕ್ರಿಕೆಟಿಗರಾದ ದುನಿತ್ ವೆಲ್ಲಲಾಗೆ ಮತ್ತು ಹರ್ಷಿತಾ ಸಮರವಿಕ್ರಮ ಅವರನ್ನು ಆಗಸ್ಟ್ 2024 ರ ಐಸಿಸಿ ತಿಂಗಳ [ICC Players of the Month for August] ಆಟಗಾರರು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪ್ರಕಟಿಸಿದೆ.* ಈ ಮೊದಲು ಜೂನ್ 2024 ರ ಐಸಿಸಿ ತಿಂಗಳ ಪ್ರಶಸ್ತಿಯನ್ನು ಭಾರತದ ಜಸ್ಪ್ರೀತ್ ಬೂಮ್ರಾ ಮತ್ತು ಸ್ಮೃತಿ ಮಂದಾನ 'ತಿಂಗಳ' ಗೌರವಕ್ಕೆ ಪಾತ್ರವಾಗಿದ್ದರು.* ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಕೇಶವ್ ಮಹಾರಾಜ್ ಮತ್ತು ವಸ್ಟ್ ಇಂಡೀಸ್ ವೇಗದ ಬೌಲರ್ ಜೇಡನ್ ಸೀಲ್ಸ್ ಅವರು ಪ್ರಶಸ್ತಿಯ ರೇಸ್‌ನಲ್ಲಿದ್ದರು. ಅವರನ್ನು ಹಿಂದಿಕ್ಕಿ ವೆಲ್ಲಾಳಗೆ ಪ್ರಶಸ್ತಿ ಗೆದ್ದರು.* ತಿಂಗಳ ಪ್ರಶಸ್ತಿ ಗೆದ್ದ ಶ್ರೀಲಂಕಾದ ಐದನೇ ಆಟಗಾರ ಅವರಾಗಿದ್ದಾರೆ. ಈ ಮೊದಲು ಏಂಜೆಲೊ ಮ್ಯಾಥ್ಸ್ (ಮೇ 2022), ಪ್ರಭಾತ್ ಜಯಸೂರ್ಯ (ಜುಲೈ 2022), ವನಿಂದು ಹಸರಂಗ (ಜೂನ್ 2023) ಮತ್ತು ಕಮಿಂದು ಮೆಂಡಿಸ್ (ಮಾರ್ಚ್ 2024) ಪ್ರಶಸ್ತಿ ಗೆದ್ದಿದ್ದರು.* 26 ವರ್ಷ ವಯಸ್ಸಿನ ಎಡಗೈ ಆಟಗಾರ್ತಿ ಹರ್ಷಿತಾ ಅವರು ಎರಡು ಟಿ20 ಪಂದ್ಯದಲ್ಲಿ 151 ರನ್ ಮತ್ತು ಮೂರು ಏಕದಿನ ಪಂದ್ಯಗಳಲ್ಲಿ 172 ರನ್ ಗಳಿಸಿದ್ದರು. ಎರಡನೇ ಪಂದ್ಯದಲ್ಲಿ 105 ರನ್ ಪಡೆದರು. ಏಕದಿನ ಪಂದ್ಯದಲ್ಲಿ ಶತಕಗಳಿಸಿದ ಶ್ರೀಲಂಕಾ ಮೂರನೇ ಬ್ಯಾಟರ್ ಇವರಾಗಿದ್ದಾರೆ.* ತಿಂಗಳ ಗೌರವ ಪಡೆದ ಲಂಕಾದ ಎರಡನೇ ಆಟಗಾರ್ತಿ ಹರ್ಷಿತಾ ಅವರರಾಗಿದ್ದರೆ. ಈ ಮೊದಲು ನಾಯಕಿ ಚಾಮರಿ ಅತ್ತಪತ್ತು (ಮೇ ಮತ್ತು ಜುಲೈ, 2024) ಎರಡು ಬಾರಿ ಪ್ರಶಸ್ತಿ ಪಡೆದುಕೊಂಡಿದ್ದರು.