* ಚೀನಾದ ಹುಲುನ್ ಬುಯಿರ್ ನಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ 2024 ಹಾಕಿ ಫೈನಲ್ ಪಂದ್ಯದಲ್ಲಿ ಆತಿಥೇಯ ಚೀನಾ ತಂಡವನ್ನು 1-0 ಗೋಲುಗಳಿಂದ ಮಣಿಸಿದ ಹರ್ಮನ್ಪ್ರೀತ್ ಸಿಂಗ್ ನಾಯಕತ್ವದ ಭಾರತ ಹಾಕಿ ತಂಡ ದಾಖಲೆಯ 5ನೇ ಬಾರಿಗೆ ಏಷ್ಯನ್ ಚಾಂಪಿಯನ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.* ಏಷ್ಯನ್ ಚಾಂಪಿಯನ್ಸ್ ಟ್ರೋಫಿ 2024 ರ ಫೈನಲ್‌ನಲ್ಲಿ ಭಾರತ 1-0 ಗೋಲುಗಳಿಂದ ಚೀನಾವನ್ನು ಸೋಲಿಸುವ ಮೂಲಕ ಚಾಂಪಿಯನ್ಸ್ ಪಟ್ಟ ಮುಡಿಗೇರಿಸಿಕೊಂಡಿದೆ. ಮೊದಲ ಮೂರು ಕ್ವಾರ್ಟರ್‌ಗಳು ಗೋಲುರಹಿತವಾಗಿ ಉಳಿದ ನಂತರ, ಟೀಮ್ ಇಂಡಿಯಾ ಅಂತಿಮವಾಗಿ ನಾಲ್ಕನೇ ಮತ್ತು ಕೊನೆಯ ಕ್ವಾರ್ಟರ್‌ನಲ್ಲಿ ಅದ್ಭುತ ಗೋಲು ಗಳಿಸಿ 1-0 ಮುನ್ನಡೆ ಸಾಧಿಸಿತು.   * ಈ ಟೂರ್ನಿಯಲ್ಲಿ ಪ್ರಾಬಲ್ಯ ಸಾಧಿಸಿ ಆಡಿದ ಎಲ್ಲ ಆರು ಪಂದ್ಯಗಳಲ್ಲಿ ಹರ್ಮನ್ ಪ್ರೀತ್ ಪದೇ ಜಯಶಾಲಿಯಾಯಿತು. ಡಿಫೆಂಡರ್ ಜುಗುರಜ್ ಸಿಂಗ್ ಅಪರೂಪ ಎಂಬಂತೆ ಈ ಪಂದ್ಯದಲ್ಲಿ ಫೀಲ್ಡ್ ಗೋಲ್ ಗಳಿಸಿದರು.* ಸೆಮಿಫೈನಲ್‌ನಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ 2-0 ಗೋಲುಗಳಿಂದ ಪಾಕಿಸ್ತಾನವನ್ನು ಮಣಿಸಿದ್ದ ಚೀನಾ, ಫೈನಲ್‌ನಲ್ಲಿಯೂ ಟೀಂ ಇಂಡಿಯಾಕ್ಕೆ ಕಠಿಣ ಹೋರಾಟ ನೀಡಿತು. ಹೀಗಾಗಿಯೇ ಪಂದ್ಯದ 50 ನಿಮಿಷಗಳ ಕಾಲ ಭಾರತಕ್ಕೆ ಯಾವುದೇ ಗೋಲು ಗಳಿಸಲು ಅವಕಾಶ ನೀಡಲಿಲ್ಲ.* ಇದು ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತಕ್ಕೆ ಸಿಕ್ಕಿರುವ ಐದನೇ ಪ್ರಶಸ್ತಿಯಾಗಿದೆ. 2011 ರಲ್ಲಿ ಆರಂಭವಾದ ಈ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ಮೊದಲ ಆವೃತ್ತಿಯಲ್ಲೇ ಚಾಂಪಿಯನ್ ಆಯಿತು. ಇದಾದ ಬಳಿಕ 2016ರಲ್ಲಿಯೂ ಭಾರತ ಪ್ರಶಸ್ತಿಯನ್ನು ವಶಪಡಿಸಿಕೊಂಡಿತ್ತು. 2018 ರಲ್ಲಿ ಭಾರತ ಮತ್ತು ಪಾಕಿಸ್ತಾನವನ್ನು ಜಂಟಿ ವಿಜೇತರು ಎಂದು ಘೋಷಿಸಲಾಯಿತು. ನಂತರ 2023 ರಲ್ಲಿ, ಟೀಂ ಇಂಡಿಯಾ ನಾಲ್ಕನೇ ಬಾರಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದೀಗ ಟೀಂ ಇಂಡಿಯಾ ಸತತ ಎರಡನೇ ಮತ್ತು ಒಟ್ಟು ಐದನೇ ಬಾರಿ ಏಷ್ಯನ್ ಚಾಂಪಿಯನ್ ಆಗಿದೆ. * ಏಷ್ಯನ್ ಚಾಂಪಿಯನ್ಸ್ ಟ್ರೋಫಿ 2024 ಹಾಕಿ ಟೂರ್ನಿಯಲ್ಲಿ ಭಾರತದ ತಂಡ ಗಳಿಸಿದ ಒಟ್ಟು ಒಟ್ಟು ಗೋಲುಗಳು 26. ಇದರಲ್ಲಿ ಭಾರತ ತಂಡದ ನಾಯಕ ಹರ್ಮನ್ ಪ್ರೀತ್ ಒಟ್ಟು 7 ಗೋಲುಗಳನ್ನು ಪಡೆದುಕೊಂಡಿದ್ದಾರೆ. * Asian Champions Trophy 2024 : ಮೊದಲನೇ ಸ್ಥಾನ ಭಾರತ ಎರಡನೇ ಸ್ಥಾನ ಚೀನಾ ಮೂರನೇ ಸ್ಥಾನ ಪಾಕಿಸ್ತಾನ