* ಜಾಗತಿಕ ಆಧ್ಯಾತ್ಮಿಕ ಗುರು, ಮಾನವತಾವಾದಿ ನಾಯಕ ಗುರುದೇವ್ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರಿಗೆ ದಕ್ಷಿಣ ಪೆಸಿಫಿಕ್ ರಾಷ್ಟ್ರವಾದ ಫಿಜಿ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.* ಆರ್ಟ್‌ ಆಫ್‌ ಲಿವಿಂಗ್‌ನ ಸಂಸ್ಥಾಪಕ ಶ್ರೀ ರವಿಶಂಕರ್ ಗುರೂಜಿ ಅವರಿಗೆ ದಕ್ಷಿಣ ಪೆಸಿಫಿಕ್‌ನ ದ್ವೀಪ ರಾಷ್ಟ್ರ ರಿಪಬ್ಲಿಕ್‌ ಆಫ್‌ ಫಿಜಿ ಅತ್ಯುನ್ನತ "ಹಾನರರಿ ಆಫೀಸರ್‌ ಆಫ್‌ ದಿ ಆರ್ಡರ್‌ ಆಫ್‌ ಫಿಜಿ" ('Honorary Officer of the Order of Fiji') ಎಂಬ ಪ್ರಶಸ್ತಿಯನ್ನು ಫಿಜಿ ರೀಪಬ್ಲಿಕ್ನ ಅಧ್ಯಕ್ಷ ಹೆಚ್.ಇ ರಟು ವಿಲ್ಲಿಯಮೆ ಎಂ. ಕಟೋನಿವೆರಿ ಅವರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ. * ಆ ಮೂಲಕ ರವಿಶಂಕರ್ ಗುರೂಜಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿ (ಪೌರ ಪ್ರಶಸ್ತಿ)ಯನ್ನು ನೀಡುತ್ತಿರುವ ಆರನೇ ದೇಶವಾಗಿ ಫಿಜಿ ಹೊರಹೊಮ್ಮದೆ.* ಮಾನವ ಸ್ಫೂರ್ತಿಯನ್ನು ನಿರಂತರವಾಗಿ ಎತ್ತಿ ಹಿಡಿಯಲು ಅವರು ಮಾಡುತ್ತಿರುವ ಕಾರ್ಯಕ್ಕಾಗಿ, ವಿವಿಧ ಸಮುದಾಯಗಳನ್ನು ಶಾಂತಿ ಮತ್ತು ಸಾಮರಸ್ಯದ ಮೂಲಕ ಒಂದಾಗಿ ತರುವ ಅವರ ಕಾರ್ಯಕ್ಕಾಗಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಯಿತು. * ಇದರೊಂದಿಗೆ ಮಾನಸಿಕ ಆರೋಗ್ಯ, ಶಿಕ್ಷಣ, ಪರಿಸರ ಜಾಗೃತಿ, ಮಹಿಳಾ ಹಾಗೂ ಯುವ ಸಬಲೀಕರಣಕ್ಕೆ ಒತ್ತು, ಒತ್ತಡ ನಿವಾರಣೆ, ಧ್ಯಾನದ ಕಾರ್ಯಮಗಳು ಹೀಗೆ ಅನೇಕ ಸಮಾಜ ಸೇವಾ ಕಾರ್ಯಗಳನ್ನು ನಡೆಸಿಕೊಡುತ್ತಿದ್ದಾರೆ.* ವಿವಿಧ ಸಮುದಾಯಗಳನ್ನು ಮಾನವೀಯ ಚೌಕಟ್ಟಿಗೆ ತಂದು ಶಾಂತಿ ಮತ್ತು ಸಾಮರಸ್ಯದ ಬದುಕು ಕಟ್ಟಿಕೊಳ್ಳಲು ಶ್ರೀ ರವಿಶಂಕರ್‌ ಗುರೂಜಿ ಅವರು ನಿರಂತರವಾಗಿ ಶ್ರಮಿಸುತ್ತಿದ್ದಾರೆ.