* ರಿಲಯನ್ಸ್ ಫೌಂಡೇಶನ್ನ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ಶ್ರೀಮತಿ ನೀತಾ ಅಂಬಾನಿ ಅವರು ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಬಡ ಕುಟುಂಬದ ಮಕ್ಕಳು ಹಾಗೂ ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ “ಆರೋಗ್ಯ ಸೇವಾ ಯೋಜನೆ”ಯನ್ನು ಜಾರಿಗೆ ತಂದಿದ್ದಾರೆ.* ಈ ಮಹತ್ವಾಕಾಂಕ್ಷೆ ಯೋಜನೆಯು ಅಗತ್ಯ ಆರೋಗ್ಯ ತಪಾಸಣೆಯನ್ನು ಒದಗಿಸಲಿದ್ದು, ಮಕ್ಕಳು, ಹದಿಹರೆಯದ ಹಣ್ಣು ಮಕ್ಕಳು ಹಾಗೂ ಮಹಿಳೆಯರಿಗೆ ಉಚಿತ ಚಿಕಿತ್ಸೆಗಳನ್ನು ನೀಡಲಿದೆ. ಸರ್ ಎಚ್.ಎನ್.ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ 10ನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಈ ಹೊಸ ಯೋಜನೆಯನ್ನು ನೀತಾ ಅಂಬಾನಿ ಅವರು ಘೋಷಣೆ ಮಾಡಿದ್ದಾರೆ.* ಆರೋಗ್ಯ ಸೇವಾ ಯೋಜನೆಯ ಉದ್ದೇಶಗಳು:- ಜನ್ಮಜಾತ ಹೃದ್ರೋಗ ಹೊಂದಿರುವ 50,000 ಮಕ್ಕಳಿಗೆ ಉಚಿತ ತಪಾಸಣೆ ಮತ್ತು ಚಿಕಿತ್ಸೆ- 50,000 ಮಹಿಳೆಯರಿಗೆ ಉಚಿತ ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ತಪಾಸಣೆ ಮತ್ತು ಚಿಕಿತ್ಸೆ- 10,000 ಹದಿಹರೆಯದ ಹುಡುಗಿಯರಿಗೆ ಉಚಿತ ಗರ್ಭಕಂಠದ ಕ್ಯಾನ್ಸರ್ ಲಸಿಕೆ* ಆಸ್ಪತ್ರೆಯು ಜಾಯಿಂಟ್ ಕಮಿಷನ್ ಇಂಟರ್ನ್ಯಾಷನಲ್ (JCI) ಮತ್ತು ಆಸ್ಪತ್ರೆಗಳು ಮತ್ತು ಆರೋಗ್ಯ ಸೇವೆ ಒದಗಿಸುವವರ ರಾಷ್ಟ್ರೀಯ ಮಾನ್ಯತೆ ಮಂಡಳಿ (NABH) ಎರಡರಿಂದಲೂ ಮಾನ್ಯತೆ ಪಡೆದಿದೆ. ಹೆಚ್ಚುವರಿಯಾಗಿ, ಇದು ಮುಂಬೈನ ಅತಿದೊಡ್ಡ ಗೋಲ್ಡ್ ಸರ್ಟಿಫೈಡ್ ಗ್ರೀನ್ ಆಸ್ಪತ್ರೆ ಎಂದು ಗುರುತಿಸಲ್ಪಟ್ಟಿದೆ. * ಆರೋಗ್ಯವಂತ ಮಹಿಳೆಯರು ಮತ್ತು ಮಕ್ಕಳು ಸಮಾಜದ ಶಕ್ತಿ ಎಂದು ನೀತಾ ಅಂಬಾನಿ ಅವರು ಹೇಳಿದರು.* ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯು ಒಂದು ದಶಕದಲ್ಲಿ ಅಸಾಧಾರಣ ಸೇವೆಗಳನ್ನು ಒದಗಿಸಿದೆ. ಈ ಆಸ್ಪತ್ರೆಯು 1.5 ಮಿಲಿಯನ್ ಮಕ್ಕಳನ್ನು ಒಳಗೊಂಡಂತೆ 2.75 ಮಿಲಿಯನ್ ಭಾರತೀಯರನ್ನು ಮರಳಿ ಬದುಕಿಸುವಲ್ಲಿ ಯಶಸ್ವಿಯಾಗಿದೆ. ಇದುವರೆಗೆ 500ಕ್ಕೂ ಹೆಚ್ಚು ಅಂಗಾಂಗ ಕಸಿ ಮಾಡಲಾಗಿದೆ. 24 ಗಂಟೆಯೊಳಗೆ ಆರು ಮಂದಿಗೆ ಅಂಗಾಂಗ ಕಸಿ ಮಾಡಿದ ದಾಖಲೆಯನ್ನೂ ಹೊಂದಿದೆ. ಇದು ಸತತವಾಗಿ ಭಾರತದ ನಂಬರ್ ಒನ್ ಮಲ್ಟಿ-ಸೃಷಾಲಿಟಿ ಆಸ್ಪತ್ರೆ ಎಂದು ಗುರುತಿಸಲ್ಪಟ್ಟಿದೆ.