Job Description: * ಜೀವನ ಜ್ಯೋತಿ, ಶಂಕತಾಭರಣ, ಸಾಗರ ಸಂಗಮಂ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ನಿರ್ದೇಶಕ 92 ವರ್ಷದ ಕೆ.ವಿಶ್ವನಾಥ್‌ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.* ವಿಶ್ವನಾಥ್‌ ರವರು ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಮತ್ತು ಬಾಲಿವುಡ್‌ ಚಿತ್ರರಂಗದಲ್ಲಿ ನಿರ್ದೇಶಕ ಮತ್ತು ನಟನಾಗಿ ಗುರುತಿಸಿಕೊಂಡಿದ್ದರು. ಕೆ ವಿಶ್ವನಾಥ್ ಅವರ ಮೃತದೇಹವನ್ನು ಜ್ಯೂಬಿಲಿ ಹಿಲ್ಸ್‌ನಲ್ಲಿರುವ ನಿವಾಸಕ್ಕೆ ಶಿಫ್ಟ್‌ ಮಾಡಿ ಅಂತಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. * ಬಿಎಸ್‌ಸಿಯಲ್ಲಿ ಡಿಗ್ರಿ ಪಡೆದಿರುವ ವಿಶ್ವನಾಥ್ ಮದ್ರಾಸ್‌ನಲ್ಲಿ ಸೌಂಡ್‌ ರೆಕಾರ್ಡಿಂಗ್‌ ಮಾಡುವ ಮೂಲಕ ಸಿನಿ ಜರ್ನಿ ಆರಂಭಿಸಿದ್ದರು. 1951ರಲ್ಲಿ ಪಾತಾಳ ಭೈರವಿ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ 1965ರಲ್ಲಿ ತೆಲುಗು ಭಾಷೆಯ ಆತ್ಮ ಗೌರವಂ ಚಿತ್ರದ ಮೂಲಕ ನಿರ್ದೇಶಕರ ಕ್ಯಾಪ್ ಧರಿಸಿದ್ದರು. * ಮೊದಲ ಚಿತ್ರಕ್ಕೆ ಅತ್ಯುತ್ತಮ ನಂದಿ ಪ್ರಶಸ್ತಿ ಲಭಿಸಿದ ನಂತರ ಓ ಸೀತಾ ಕಥಾ, ಜೀವನ ಜ್ಯೋತಿ, ಶಂಕರಾಭರಣಂ, ಸಿರಿ ಸಿರಿ ಮುವ್ವ, ಸ್ವಾತಿ ಮುತ್ಯಂ, ಸಪ್ತಪದಿ, ಸ್ವರ್ಣ ಕಮಲಂ, ಸಾಗರ ಸಂಗಮಂ ಸೇರಿದಂತೆ ಅನೇಕ ಸೂಪರ್ ಹಿಟ್ ಕನ್ನಡ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು.