- ಅಮೇರಿಕದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಪ್ರಯೋಗವೊಂದಕ್ಕೆ ಈಗ ನಾಸಾ ಮುಂದಾಗಿದೆ. ಶನಿ ಗ್ರಹದ ಉಪಗ್ರಹವಾದ “ಎನ್‌ಸೆಲಡಸ್‌’ನ ಅಂಗಳದಲ್ಲಿ ಅಧ್ಯಯನ ನಡೆಸಲು ಹಾವಿನ ಆಕಾರದ ರೊಬೋಟ್‌ವೊಂದನ್ನು ನಾಸಾವು ಅಭಿವೃದ್ಧಿಪಡಿಸುತ್ತಿದೆ.- ಎನ್‌ಸೆಲಡಸ್‌ನಲ್ಲಿನ ಭೌಗೋಳಿಕ ರಚನೆಯನ್ನು ಅಭ್ಯಸಿಸಿ, ಅದು ವಾಸಯೋಗ್ಯವೇ, ಅಲ್ಲಿ ಜೀವಸಂಕುಲದ ಕುರುಹೇನಾದರೂ ಇದೆಯೇ ಎಂಬ ಬಗ್ಗೆ ಈ ರೊಬೋಟ್‌ ಅಧ್ಯಯನವನ್ನು ಮಾಡಲಿದೆ.- ಈ ಅಧ್ಯಯನಕ್ಕೆಂದೇ ಎಕೊಬಯಾಲಜಿ ಎಕ್ಸ್‌ಟೆಂಟ್‌ ಲೈಫ್ ಸರ್ವೇಯರ್‌(ಈಲ್ಸ್‌) ಎಂಬ ಸಂಚಾರಿ ಸಾಧನವನ್ನು ನಾಸಾ ಅಭಿವೃದ್ಧಿಪಡಿಸುತ್ತಿದೆ. ಈ ಸಾಧನವು ನೋಡಲು  ಹಾವಿನಂತಿರಲಿದೆ. ಉಬ್ಬು, ತಗ್ಗು ಸೇರಿದಂತೆ ಎಲ್ಲ ರೀತಿಯ ಭೂ ಪ್ರದೇಶದಲ್ಲೂ ಸರಳವಾಗಿ ಸಂಚರಿಸಲು ಆಗಬೇಕು ಎಂಬ ಕಾರಣದಿಂದಲೇ ಇದಕ್ಕೆ ಹಾವಿನ ಆಕಾರವನ್ನು ನೀಡಲಾಗುತ್ತಿದೆ.