Job Description: * ಕರ್ನಾಟಕಕ್ಕೆ ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯ ಮಂಜೂರಾಗಿದ್ದು, ಶಿವಮೊಗ್ಗದಲ್ಲಿ ರಕ್ಷಣಾ ವಿಶ್ವವಿದ್ಯಾಲಯ ಆರಂಭವಾಗಲಿದೆ. ಸದ್ಯಕ್ಕೆ ಸಮಾಜ ಕಲ್ಯಾಣ ಇಲಾಖೆಯ ಕಟ್ಟಡದಲ್ಲಿ ಈ ಶೈಕ್ಷಣಿಕ ವರ್ಷದದಿಂದಲೇ ತರಗತಿ ಆರಂಭಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ.* ಜಿಲ್ಲಾಡಳಿತವು 8 ಎಕರೆ ಜಮೀನು ಮಂಜೂರು ಮಾಡಿದೆ. ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿ, ಯುಜಿಸಿ ಮಾನ್ಯತೆಯೊಂದಿಗೆ ಈ ವಿಶ್ವವಿದ್ಯಾಲಯವು ಕಾರ್ಯ ನಿರ್ವಹಿಸಲಿದೆ. ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ ಕೋರ್ಸ್‌ಗಳು ಇರಲಿವೆ. ದ್ವಿತೀಯ ಪಿಯುಸಿ ನಂತರ ಪ್ರವೇಶ ಪಡೆಯಬಹುದು' ಎಂದರು.