* ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಚೆನಾಬ್‌ ನದಿ ಮೇಲೆ ನಿರ್ಮಿಸಿರುವ ಜಗತ್ತಿನ ಅತಿ ಎತ್ತರದ ಉಕ್ಕಿನ ಕಮಾನು ರೈಲ್ವೆ ಸೇತುವೆ ಲೋಕಾರ್ಪಣೆಗೆ ಕೇಂದ್ರ ಸರ್ಕಾರ ಅಂತಿಮ ಹಂತದ ಸಿದ್ಧತೆ ನಡೆಸಿದೆ.* 1.3 ಕಿ.ಮೀ ಉದ್ದದ ಸೇತುವೆಯು ನದಿಪಾತ್ರದಿಂದ 359 ಮೀಟರ್‌ (1,178 ಅಡಿ) ಎತ್ತರದಲ್ಲಿ ಚೆನಾಬ್ ನದಿಯನ್ನು ವ್ಯಾಪಿಸಿದೆ. ಅಂದರೆ ವಿಶ್ವವಿಖ್ಯಾತ ಐಫೆಲ್ ಟವರ್‌ಗಿಂತ 35 ಮೀಟರ್ ಎತ್ತರ ಇರಲಿದೆ. * ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕದ ಭಾಗವಾಗಿ ಈ ಸೇತುವೆ ನಿರ್ಮಾಣವಾಗುತ್ತಿದೆ. ಅತ್ಯಂತ ಸವಾಲಿನ ಕೆಲಸವನ್ನು ಪೂರ್ಣಗೊಳಿಸಿರುವ ಸಿಬ್ಬಂದಿಯನ್ನು ಶ್ಲಾಘಿಸಲಾಗುತ್ತಿದೆ. ಈ ವಿಸ್ಮಯವನ್ನು ಪ್ರವಾಸಿತಾಣವಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.* ಭಾರತೀಯ ರೈಲ್ವೇಯು ವಿಶ್ವದ ಅತಿ ಎತ್ತರದ ಉಕ್ಕಿನ ಕಮಾನು ರೈಲು ಸೇತುವೆಯಾದ ಚೆನಾಬ್ ಸೇತುವೆಯನ್ನು ದಾಟುವ ಮೂಲಕ ಸಂಗಲ್ಡಾನ್‌ನಿಂದ ರಿಯಾಸಿವರೆಗೆ ಎಲೆಕ್ಟ್ರಿಕ್ ಎಂಜಿನ್‌ನ ಯಶಸ್ವಿ ಪ್ರಯೋಗವನ್ನು ಪೂರ್ಣಗೊಳಿಸಿದೆ.* ಸಂಗಲ್ಡನ್‌ನಿಂದ ರಿಯಾಸಿ ನಡುವಿನ ಮೊದಲ ಪ್ರಾಯೋಗಿಕ ರೈಲು ಸಂಚಾರ ಚೆನಾಬ್ ಸೇತುವೆಯನ್ನು ದಾಟುವುದರೊಂದಿಗೆ ಯಶಸ್ವಿಯಾಗಿ ಸಂಚರಿಸಿದೆ. USBRL(Udhampur-Srinagar-Baramulla Rail link) รอก ಎಲ್ಲಾ ನಿರ್ಮಾಣ ಕಾರ್ಯಗಳು ಬಹುತೇಕ ಪೂರ್ಣಗೊಂಡಿವೆ. ಆದರೆ ಸುರಂಗ ಸಂಖ್ಯೆ 1 ಮಾತ್ರ ಭಾಗಶಃ ಅಪೂರ್ಣವಾಗಿ ಉಳಿದಿದೆ ಎಂದು ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆ.