* ಹೈದರಾಬಾದ್ ಸಂಸ್ಥಾನವನ್ನು ಒಕ್ಕೂಟ ವ್ಯವಸ್ಥೆಗೆ ಸೇರಿಸಲು ಅಂದಿನ ಗೃಹ ಸಚಿವರಾದ ಸರ್ದಾರ್ ವಲ್ಲಭಭಾಯಿ ಪಟೇಲರು ಕೈಗೊಂಡ ಕಾರ್ಯಾಚರಣೆಯೆ "ಆಪರೇಷನ್ ಪೋಲೋ" * 1948ರ ಸೆಪ್ಟೆಂಬರ್ 13 ರಿಂದ 17ರ ವರೆಗೆ ಈ ಕಾರ್ಯಾಚರಣೆ ಜರುಗಿದ್ದು, 1948ರ ಸೆಪ್ಟೆಂಬರ್ 17ರಂದು ಹೈದರಾಬಾದ್ ನಿಜಾಮನಿಂದ ಹೈದರಾಬಾದ್ ಮುಕ್ತಿಗೊಂಡಿತು. ಇದನ್ನೇ "ಕಲ್ಯಾಣ ಕರ್ನಾಟಕದ ದಿನ"ವನ್ನಾಗಿ ಆಚರಿಸಲಾಗುತ್ತದೆ .* "ಆಪರೇಷನ್ ಪೋಲೋ" ಎಂದು ಹೆಸರು ಬರಲು ಕಾರಣ ಹೈದರಾಬಾದ್ನಲ್ಲಿ ಪೋಲೋ ಮೈದಾನಗಳು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ "ಆಪರೇಷನ್ ಪೋಲೋ" ಎಂದು ಹೆಸರಿಡಲಾಯಿತು.