* 2015 ರಿಂದ ವಿಶ್ವ ಅಥ್ಲೆಟಿಕ್ಸ್‌ನ ಅಧ್ಯಕ್ಷರಾದ ಸೆಬಾಸ್ಟಿಯನ್ ಕೊ ಅವರು ಆಗಸ್ಟ್ 17 ರಂದು ಮೂರನೇ ಅವಧಿಗೆ ಮತ್ತು ಅಂತಿಮ ನಾಲ್ಕು ವರ್ಷಗಳ ಆದೇಶದ ಮೇರೆಗೆ ಟ್ರ್ಯಾಕ್ ಮತ್ತು ಫೀಲ್ಡ್‌ನ ಆಡಳಿತ ಮಂಡಳಿಯ ಮುಖ್ಯಸ್ಥರಾಗಿ ಪುನರ ಆಯ್ಕೆಯಾದರು. * ಮಾಜಿ ಅಥ್ಲೆಟ ಆಗಿರುವ 66 ವರ್ಷದ ಕೊ ಅವರು 1980 (ಮಾಸ್ಕೊ) ಮತ್ತು 1984ರ (ಲಾಸ್ ಏಂಜಲೀಸ್) ಒಲಿಂಪಿಕ್ಸ್‌ನ 1,500 ಮೀ. ಓಟದಲ್ಲಿ ಚಾಂಪಿಯನ್‌ ಆಗಿದ್ದರು.* ಇದು ಕೊ ಅವರ ಕೊನೆಯ ಅಧಿಕಾರ ಅವಧಿಯಾಗಲಿದೆ.ವಿಶ್ವ ಅಥ್ಲೆಟಿಕ್ಸ್ ನಿಯಮಾವಳಿ ಪ್ರಕಾರ ಅವರು ನಾಲ್ಕನೇ ಅವಧಿಗೆ ಸ್ಪರ್ಧಿಸುವಂತಿಲ್ಲ.* ಭಾರತ ಅಥ್ಲೆಟಿಕ್ ಫೆಡರೇಷನ್ ಅಧ್ಯಕ್ಷರಾದ ಆದಿಲ್ ಸುಮಾರಿವಾಲಾ ಅವರು ವಿಶ್ವ ಅಥ್ಲೆಟಿಕ್ಸ್ ನ ಉಪಾಧ್ಯಕ್ಷರಾಗಿ ಆಯ್ಕೆಯಾದರು.