* ಮಾಜಿ ಸಚಿವ ಹಾಗೂ ಹಿರಿಯ ರಾಜಕಾರಣಿಯಾದ ಕಾಗೋಡು ತಿಮ್ಮಪ ರವರು ಪ್ರಸಕ್ತ ಸಾಲಿನ (2023-24) ಡಿ. ದೇವರಾಜ ಅರಸು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.* ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಶಿಲಾರಾಜ್ ತಂಡರಗಿಯವರು ಈ ಪ್ರಶಸ್ತಿಯನ್ನು ಆಗಸ್ಟ್ 20 ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಲಿರುವ ಡಿ. ದೇವರಾಜ್ ಅರಸು ರವರ 108ನೇ ಜನ್ಮದಿನಾಚರಣೆ ಕಾರ್ಯಕ್ರಮದಂದು ಪ್ರಶಸ್ತಿ ಪ್ರಧಾನ ಮಾಡಲಾಗುವದು ಎಂದು ತಿಳಿಸಿದ್ದಾರೆ.* ಸಾಹಿತಿ ಶಿ.ರಾಮಚಂದ್ರೇಗೌಡ ನೇತೃತ್ವದ ಆಯ್ಕೆ ಸಮಿತಿ ದೇವರಾಜ್ ಅರಸು ಪ್ರಶಸ್ತಿಗೆ ಕಾಗೋಡು ತಿಮ್ಮಪ್ಪ ರವರನ್ನು ಆಯ್ಕೆ ಮಾಡಿದ್ದು, ಈ ಪ್ರಶಸ್ತಿಯು 5 ಲಕ್ಷ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.* ಕಾಗೋಡು ತಿಮ್ಮಪ್ಪ ಅವರು ಆರೋಗ್ಯ, ಸಮಾಜ ಕಲ್ಯಾಣ, ಕಂದಾಯ ಮತ್ತು ಇತರ ಖಾತೆಗಳ ಸಚಿವರಾಗಿ ಹಾಗೂ ವಿಧಾನಸಭಾ ಸಭಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.