* ಪ್ರಸ್ತುತ ವರ್ಷದ ರವೀಂದ್ರನಾಥ್ ಟ್ಯಾಗೋರ್ ಸಾಹಿತ್ಯ ಪ್ರಶಸ್ತಿಯ ಆರನೇ ಆವೃತ್ತಿಯನ್ನು ಕವಿ ವಿಮರ್ಶಕಿ ಆದಂತಹ " ಸುಕೃತ ಪಾಲ್ ಕುಮಾರ್ " ಅವರಿಗೆ ನೀಡಲಾಯಿತು. ಈ ಪ್ರಶಸ್ತಿಯು ಅವರ " ಸಾಲ್ಟ್ & ಪೆಪ್ಪರ್ : ಸೆಲೆಕ್ಟೆಡ್ ಪೊಯಮ್ಸ್ " ಪುಸ್ತಕಕ್ಕಾಗಿ ನೀಡಲಾಯಿತು.* ಈ ಪ್ರಶಸ್ತಿಯು 5,000 USD ಮೊತ್ತ, ಟ್ಯಾಗೋರ್ ಪ್ರತಿಮೆ ಹಾಗೂ ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ ಪ್ರಮಾಣಪತ್ರವನ್ನು ಒಳಗೊಂಡಿರುತ್ತದೆ.* ಈ ಒಂದು ಪ್ರಶಸ್ತಿಯನ್ನು ಯು ಎ ಎಸ್ ಮೂಲದ ಪ್ರಕಾಶ್ ಪೀಟರ್ ಬುಂಡಾಲೊ ಎಂಬುವವರು  2018ರಲ್ಲಿ ಸ್ಥಾಪಿಸಿದರು.* ಈ ಪ್ರಶಸ್ತಿಯನ್ನು ಪ್ರಪಂಚದಾದ್ಯಂತ ಅತ್ಯುತ್ತಮ ಸಾಹಿತ್ಯ ಕೃತಿಗಳನ್ನು ಗುರುತಿಸಲು ಮತ್ತು ವಿಶ್ವಶಾಂತಿ ಸಾಹಿತ್ಯ ಕಲೆ ಶಿಕ್ಷಣ ಮತ್ತು ಮಾನವ ಹಕ್ಕುಗಳಂತಹ ಮೌಲ್ಯಗಳನ್ನು ಉತ್ತೇಜಿಸಲು ನೀಡಲಾಗುತ್ತದೆ.* ಕಳೆದ ವರ್ಷ ಪತ್ರಕರ್ತ- ಲೇಖಕ " ರಾಜ್ ಕಮಲ್ ಝಾ " ಅವರ " ದಿ ಸಿಟಿ ಅಂಡ್ ದಿ ಸಿ " ಎಂಬ ಕಾದಂಬರಿಗಾಗಿ ನೀಡಲಾಗಿತ್ತು.