* ರಾಷ್ಟ್ರೀಯ ಅಪರಾಧ ದಾಖಲಾತಿ ವಿಭಾಗ (ಎನ್‌ಸಿಆರ್‌ಬಿ)ದ ವಾರ್ಷಿಕ ಪ್ರಶಸ್ತಿ ಪ್ರಕಟಗೊಂಡಿದ್ದು, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ಐದು ಪ್ರಶಸ್ತಿಗಳು ಲಭಿಸಿವೆ. ಕೇಂದ್ರ ಗೃಹ ಇಲಾಖೆ ಹಾಗೂ ರಾಷ್ಟೀಯ ಅಪರಾಧ ದಾಖಲಾತಿ ವಿಭಾಗದ ಸಹಯೋಗದಲ್ಲಿ ದೆಹಲಿಯಲ್ಲಿ ನಡೆದ ಸಮ್ಮೇಳನದಲ್ಲಿ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಯಿತು.  * ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಕೈಮ್ ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್‌ವರ್ಕ್ ಆ್ಯಂಡ್ ಸಿಸ್ಟಮ್, ಇಂಟರ್ ಒಪೆರಬಲ್ ಕ್ರಿಮಿನಲ್ ಜಸ್ಟೀಸ್ ಯೋಜನೆಗಳ ಅನುಷ್ಠಾನಗೊಳಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. * ಇಂಟರ್ ಅಪರೇಬಲ್ ಕ್ರಿಮಿನಲ್ ಜಸ್ಟಿಸ್ ಸಿಸ್ಟಮ್ ಯೋಜನೆಯಡಿ ಪೊಲೀಸ್, ನ್ಯಾಯಾಂಗ, ಬಂಧಿಖಾನೆ, ಅಭಿಯೋಗ ಮತ್ತು ನ್ಯಾಯ ವಿಜ್ಞಾನ ಪ್ರಯೋಗಾಲಯಗಳೊಂದಿಗೆ ಅಪರಾಧ ಮತ್ತು ಅಪರಾಧಿಗಳ ಮಾಹಿತಿಯನ್ನು ಡಿಜಿಟಲ್‌ನಲ್ಲಿ ವಿನಿಮಯ ಮಾಡಿಕೊಳ್ಳಲು ಮತ್ತು ತ್ವರಿತವಾಗಿ ಪ್ರಕರಣಗಳ ವಿಲೇವಾರಿಗೆ ಸಹಕಾರಿ ಆಗುವ ವ್ಯವಸ್ಥೆಯನ್ನು ರಾಜ್ಯಪೊಲೀಸ್ ಇಲಾಖೆ ವ್ಯವಸ್ಥೆಯಲ್ಲಿ ಸೃಜಿಸಿದೆ. ಈ ಸೇವೆಯನ್ನು ಗುರುತಿಸಿ 3ನೇ ಬಹುಮಾನವನ್ನು ನೀಡಿ ಪ್ರಶಂಸಿದೆ.* ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಪೊಲೀಸ್ ಗಣಕ ವಿಭಾಗ) ಡಾ. ಪ್ರಣವ್ ಮೊಹಾಂತಿಗೆ ಗುಡ್ ಪ್ರಾಕ್ಟೀಸಸ್ ಇನ್ ನೆಟ್‌ವರ್ಕಿಂಗ್  ಆ್ಯಂಡ್ ಸೈಬರ್ ಸೆಕ್ಯೂರಿಟಿ ಪ್ರಸೆಟೇಷನ್ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.* ಸಿಸಿಟಿಎನ್‌ಎಸ್ ಮತ್ತು ಐಸಿಜೆಎಸ್ ವಿಭಾಗದಲ್ಲಿ ರಾಜ್ಯ ಅಪರಾಧ ದಾಖಲಾತಿ ವಿಭಾಗದಲ್ಲಿ (ಎಸ್‌ಸಿಆರ್‌ಬಿ) ಉತ್ತಮ ಸೇವೆ ಸಲ್ಲಿಸಿದ ಎಸ್‌ಸಿಆರ್‌ಬಿ ಸಬ್‌ಇನ್‌ಸ್ಪೆಕ್ಟರ್ ಚೇತನ್ ಕುಮಾರ್, ಎಎಸ್‌ಐ ದಿನೇಶ್‌ಬಾಬು ಮತ್ತು ಎಎಸ್‌ಐ ಮುನಿರಾಜು ಎಂಬುವವರು ಪ್ರತ್ಯೇಕ ಪ್ರಶಸ್ತಿ ಪಡೆದರು.