* ಅಸ್ಸಾಂ ರಾಜ್ಯದ ಗುವಾಹಟಿಯಲ್ಲಿ 85ನೇ ಆವೃತ್ತಿ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ ಶಿಪ್ ನಡೆಯಿತು. ಅನ್ಮೋಲ್ ಖರ್ಬ್, ಚಿರಾಗ್ ಸೇನ್ ರಾಷ್ಟ್ರೀಯ ಚಾಂಪಿಯನ್ ಪಟ್ಟವನ್ನು  ಅಲಂಕರಿಸಿದರು.* ಸೀನಿಯರ್ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಅನ್ಮೋಲ್ ಖರ್ಬ್ ಅವರು ಪಂಜಾಬ್‌ನ ತನ್ವಿ ಶರ್ಮಾ ಅವರನ್ನು 15-21, 21-17, 16-8 ಸೆಟ್‌ಗಳಿಂದ ಸೋಲಿಸುವ ಮೂಲಕ ಮಹಿಳಾ ಸಿಂಗಲ್ಸ್ ರಾಷ್ಟ್ರೀಯ ಚಾಂಪಿಯನ್ ಕಿರೀಟವನ್ನು ಅಲಂಕರಿಸಿದರು. * ಪುರುಷರ ಸಿಂಗಲ್ಸ್ ಪ್ರಶಸ್ತಿ ಹಣಾಹಣಿಯಲ್ಲಿ ಚಿರಾಗ್ ಸೇನ್ 21-14, 13-21, 21-9 ರಲ್ಲಿ ತೆಲಂಗಾಣದ ನಾಲ್ಕನೇ ಶ್ರೇಯಾಂಕದ ಮತ್ತು BAI ಶ್ರೇಯಾಂಕದಲ್ಲಿ ಭಾರತದ ನಂ. 2 ತರುಣ್ ಎಂ ಅವರನ್ನು ಸೋಲಿಸಿ ರಾಷ್ಟ್ರೀಯ ಚಾಂಪಿಯನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.* ಪುರುಷರ ಡಬಲ್ಸ್ ಪ್ರಶಸ್ತಿಯನ್ನು :  ಪುರುಷರ ಡಬಲ್ಸ್ ಫೈನಲ್‌ನಲ್ಲಿ ಕೆ ಪೃಥ್ವಿ ರಾಯ್ ಮತ್ತು ಸೂರಜ್ ಗೋಲಾ ಅವರು ಹೆಚ್ಚು ಅನುಭವಿ ಕೃಷ್ಣ ಪ್ರಸಾದ್ ಗರಗ ಮತ್ತು ವಿಷ್ಣುವರ್ಧನ್ ಗೌಡ್ ಪಂಜಾಲ ಅವರನ್ನು 20-22, 24-22, 21-14 ರಿಂದ ಸೋಲಿಸುವ ಮೂಲಕ ಅಮೋಘ ಗೆಲುವು ಸಾಧಿಸುವ ಪುರುಷರ ಡಬಲ್ಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.* ಮಹಿಳೆಯರ ಡಬಲ್ಸ್ ಪ್ರಶಸ್ತಿ : ಪ್ರಿಯಾ ದೇವಿ ಕೊಂಜೆಂಗ್‌ಬಾಮ್ ಮತ್ತು ಶ್ರುತಿ ಮಿಶ್ರಾ ಅವರು ಮಹಾರಾಷ್ಟ್ರದ ರಿತಿಕಾ ಠಾಕರ್ ಮತ್ತು ಸಿಮ್ರಾನ್ ಸಿಂಘಿ ವಿರುದ್ಧ ಒಂದು ಗಂಟೆ 11 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 11-21, 21-14, 21-18 ರಿಂದ ಅಮೋಘ ಗೆಲುವು ಸಾಧಿಸುವ ಮೂಲಕ ಮಹಿಳೆಯರ ಡಬಲ್ಸ್ ಪ್ರಶಸ್ತಿಯನ್ನು ಎತ್ತಿ ಹಿಡಿದರು.