* Indian ocean navel symposium conclave of chiefs - ಎಂಟನೇ ಆವೃತ್ತಿಯು ಥೈಲ್ಯಾಂಡ್ನ ಬ್ಯಾಂಕಾಕ್ ನಲ್ಲಿ ಡಿಸೆಂಬರ್ 19 ರಿಂದ 22 ರವರೆಗೆ ನಡೆಯಿತು.* ಈ ಒಂದು ಮಹತ್ವದ ಸಂಕಿರಣದಲ್ಲಿ ನೌಕಾಪಡೆಗಳ ಮುಖ್ಯಸ್ಥರು, ವೀಕ್ಷಕ ದೇಶಗಳ ಹಿರಿಯ ಪ್ರತಿನಿಧಿಗಳು ಭಾಗವಹಿಸಿದ್ದರು.* ಹಿಂದೂ ಮಹಾಸಾಗರ ನೌಕಾ ವಿಚಾರ ಸಂಕಿರಣ ಚಿಪ್ಸ್ ಕಾನ್ ಕ್ಲೇವ್ ನ ಅಧ್ಯಕ್ಷತೆಯನ್ನು ಥೈಲ್ಯಾಂಡ್ ವಹಿಸಿಕೊಂಡಿತ್ತು ಮತ್ತು ಎರಡು ವರ್ಷಗಳ ಸಮಗ್ರ ಕೆಲಸದ ಯೋಜನೆಯನ್ನು ಅಂತಿಮಗೊಳಿಸಲಾಯಿತು.* ಭಾರತ ದೇಶವು ವಿನ್ಯಾಸಗೊಳಿಸಿದ  IONS ಧ್ವಜವನ್ನು, IONS ಆಯ್ಕೆ ಮಾಡಿಕೊಂಡಿರುವುದು ಗಮನಾರ್ಹ ವಿಷಯ.* ಮುಂಬರುವ ಸಾಲಿಗೆ ನೌಕಾ ಭದ್ರತೆ, ಮಾನವೀಯ ನೆರವು 20 ಪರಿಹಾರ ಕುರಿತು ಐ ಓ ಏನ್ ಎಸ್ ವರ್ಕಿಂಗ್ ಗುಂಪುಗಳ ಸಹ ಅಧ್ಯಕ್ಷ ಪಾತ್ರವನ್ನು ಭಾರತ ವಹಿಸಿಕೊಂಡಿತು.* ರಿಪಬ್ಲಿಕ್ ಆಫ್ ಕೊರಿಯಾ ನೌಕಾಪಡೆಯನ್ನು ಇತ್ತೀಚಿನ ವೀಕ್ಷಕರಾಗಿ ಆಯ್ಕೆ ಮಾಡಿಕೊಂಡು, IONS ಸಾಮೂಹಿಕ ಶಕ್ತಿಯನ್ನು 34ಕ್ಕೆ ಹೆಚ್ಚಿಸಿಕೊಂಡಿತು, ಅದರಲ್ಲಿ 25 ಸದಸ್ಯರು ಮತ್ತು 9 ವೀಕ್ಷಕರು.* IONS ಇದು ಭಾರತ ನೌಕಾಪಡೆಯು 2008ರಲ್ಲಿ ರೂಪಿಸಿದ್ದು, ಹಿಂದೂ ಮಹಾಸಾಗರದ ಕರಾವಳಿ ರಾಜ್ಯಗಳ ನೌಕಾಪಡೆಗಳ ನಡುವೆ ಕಡಲ ಸಹಕಾರವನ್ನು ಹೆಚ್ಚಿಸಲು ಮುಕ್ತ ಮತ್ತು ಅಂತರ್ಗತ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ.