* ಮಹಾರಾಷ್ಟ್ರದ ಕರಾವಳಿ ರತ್ನಗಿರಿ ಜಿಲ್ಲೆಯ ಬರ್ಸು ಗ್ರಾಮದಲ್ಲಿ ಸಂಸ್ಕರಣಾಗಾರವನ್ನು ಸ್ಥಾಪಿಸುವ ನಿರೀಕ್ಷೆಯಿಂದ  ಮಹಾರಾಷ್ಟ್ರ ಸರ್ಕಾರವು ರತ್ನಗಿರಿ ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (RRPCL)ಯೋಜನೆಯನ್ನು ಪ್ರಸ್ತಾಪಿಸಿದ್ದು, ಇದು ವಿಶ್ವದ ಅತಿದೊಡ್ಡ ಏಕ ಸ್ಥಳ ಸಂಸ್ಕರಣಾಗಾರ ಸಂಕೀರ್ಣವಾಗಿದೆ. * ಸೌದಿ ಅರಾಮ್ಕೊ, ಅಬುಧಾಬಿ ನ್ಯಾಶನಲ್ ಆಯಿಲ್ ಕಂಪನಿ (ADNOC), ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್, ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂಕಾರ್ಪೊರೇಷನ್ ಲಿಮಿಟೆಡ್ ರತ್ನಗಿರಿ ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಯೋಜನೆಯ ಜಂಟಿ ಪಾಲುದಾರಿಕೆಯನ್ನು ಒಳಗೊಂಡಿದೆ. * ರತ್ನಗಿರಿ ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಯೋಜನೆಗೆ ಸುಮಾರು ರೂ. 3 ಲಕ್ಷ ಕೋಟಿ ಮತ್ತು ರತ್ನಗಿರಿ ಮತ್ತು ನೆರೆಯ ಸಿಂಧುದುರ್ಗ ಜಿಲ್ಲೆಗಳ 14 ಗ್ರಾಮಸ್ಥರಿಂದ 6,200 ಎಕರೆ ಭೂಮಿ ಅಗತ್ಯವಿದೆ.