* ರಷ್ಯಾಗೆ ಭಾರತದ ರಾಯಭಾರಿಯಾಗಿ ವಿನಯ್‌ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ 2024 ಮಾರ್ಚ್ 19 ರಂದು (ಮಂಗಳವಾರ) ಪ್ರಕಟಣೆ ಹೊರಡಿಸಿದೆ. * ಪ್ರಸ್ತುತ ವಿನಯ್‌ ಕುಮಾರ್‌ ಅವರು ಮ್ಯಾನ್ಮಾರ್‌ನಲ್ಲಿ ಭಾರತದ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಶೀಘ್ರದಲ್ಲಿಯೇ ರಷ್ಯಾದ ಭಾರತ ರಾಯಭಾರಿಯಾಗಿ ಅಧಿಕಾರವಹಿಸಿಕೊಳ್ಳಲಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. * ಈ ಹಿಂದೆ ರಷ್ಯಾದಲ್ಲಿ ಭಾರತದ ರಾಯಭಾರಿಯಾಗಿ ಪವನ್ ಕಪೂರ್ ಅವರು ಕಾರ್ಯನಿರ್ವಹಿಸುತ್ತಿದ್ದರು.* ಐಐಟಿ-ಖರಗ್‌ಪುರದ ಪದವೀಧರರಾಗಿರುವ ಕುಮಾರ್ ಅವರು 2018-20ರಿಂದ ಕಾಬೂಲ್‌ನಲ್ಲಿ ಹಾಗೂ ಭಾರತೀಯ ವಿದೇಶಾಂಗ ಸೇವೆಯ 1992 ರ ಬ್ಯಾಚನ ಅಧಿಕಾರಿಯಾಗಿರುವ ವಿನಯ್‌ ಕುಮಾರ್ ಅವರು 2021 ರ ಅಂತ್ಯದಿಂದ ಮ್ಯಾನ್ಮಾರ್‌ನಲ್ಲಿ ಭಾರತದ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.