* ರೇಲ್ವೆ ದುರಂತಗಳನ್ನು ತೆಡೆಗಟ್ಟುವ ಸಲುವಾಗಿ ಕೈಗೊಂಡಿದ್ದ ಸ್ವಯಂಚಾಲಿತ ರೈಲು ಸಂರಕ್ಷಣಾ ವ್ಯವಸ್ಥೆ ಕವಚದ ಪರೀಕ್ಷೆ ಯಶಸ್ವಿಯಾಗಿದೆ. ಎಂದು ಉತ್ತರ ಕೇಂದ್ರ ರೈಲ್ವೆಯ ಆಗ್ರಾ ವಿಭಾಗವು ತಿಳಿಸಿದೆ. * ಸೆಮಿ ಹೈಸ್ಪೀಡ್ / 160 ಕಿ.ಮೀ ವೇಗದಲ್ಲಿ ಸಂಚರಿಸುತ್ತಿದ್ದ ರೈಲು, ರೆಡ್ ಸಿಗ್ನಲ್ ಕಂಡ ಕೂಡಲೇ ಸ್ವಯಂಚಾಲಿತವಾಗಿ ಬ್ರೇಕ್ ಹಾಕಿ, ನಿಲ್ಲುವ ಮೂಲಕ ಪರೀಕ್ಷೆ ಯಶಸ್ವಿ ಯಾಗಿದೆ, ಈ ವ್ಯವಸ್ಥೆಯನ್ನು ರಿಸರ್ಚ್ ಡಿಸೈನ್ &  ಸ್ಟ್ಯಾಂಡರ್ಡ್ ಆರ್ಗನೈಸೇಷನ್ (ಆರ್‌ಡಿಎಸ್‌ಒ) ಅಭಿವೃದ್ಧಿಪಡಿಸಿದೆ. ಸಂದರ್ಭಗಳಲ್ಲಿ ಲೋಕೋ ಪೈಲಟ್. ಬ್ರೇಕ್ ಹಾಕಲು ವಿಫಲವಾದಾಗ ಕವಚ ವ್ಯವಸ್ಥೆಯು ತಾನಾಗಿಯೇ ಬ್ರೇಕ್ ಹಾಕಿ ರೈಲನ್ನು ನಿಲ್ಲಿಸುತ್ತದೆ.* ಸುರಕ್ಷತೆ ದೃಷ್ಟಿಯಿಂದ - ದೇಶದ ರೈಲ್ವೆ ಜಾಲದಲ್ಲಿ ಕವಚ ವ್ಯವಸ್ಥೆ ಅಳವಡಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಶತಾಬಿ ಮತ್ತು ಗತಿಮಾನ್ ಎಕ್ಸ್‌ಪ್ರೆಸ್ ನಂತಹ ರೈಲುಗಳಲ್ಲಿಯೂ ಈ ವ್ಯವಸ್ಥೆಯನ್ನು ಪರೀಕ್ಷಿಸಲಾಗುತ್ತದೆ. * ಕವಚ್ ಆಡಿಯೊ-ವಿಡಿಯೋ ಮೂಲಕ ಮೊದಲು ಎಚ್ಚರಿಸುತ್ತದೆ. ಅದಕ್ಕೆ ಯಾವುದೇ ಪ್ರತಿಕ್ರಿಯೆ ಇಲ್ಲದಿದ್ದರೆ, ರೈಲಿನಲ್ಲಿ ಸ್ವಯಂಚಾಲಿತ ಬ್ರೇಕ್‌ಗಳನ್ನು ಅನ್ವಯಿಸಲಾಗುತ್ತದೆ. ಇದರೊಂದಿಗೆ, ಈ ವ್ಯವಸ್ಥೆಯು ರೈಲು ನಿಗದಿತ ವಿಭಾಗದ ವೇಗಕ್ಕಿಂತ ವೇಗವಾಗಿ ಓಡಲು ಅನುಮತಿಸುವುದಿಲ್ಲ. * ರಕ್ಷಾಕವಚದಲ್ಲಿರುವ RFID ಸಾಧನಗಳನ್ನು ರೈಲು ಎಂಜಿನ್, ಸಿಗ್ನಲ್ ವ್ಯವಸ್ಥೆ, ರೈಲು ನಿಲ್ದಾಣದ  (Railway Station) ಒಳಗೆ ಅಳವಡಿಸಲಾಗುವುದು. ಜಿಪಿಎಸ್ (GPS), ರೇಡಿಯೋ ಫ್ರೀಕ್ವೆನ್ಸಿಯಂತಹ ವ್ಯವಸ್ಥೆಗಳಲ್ಲಿ ಕವಚ್ ತಂತ್ರಜ್ಞಾನ ಕಾರ್ಯ ನಿರ್ವಹಿಸಲಿದೆ. * ಪ್ರಯೋಗಗಳ ಆಧಾರದ ಮೇಲೆ, 160 kmph ವೇಗಕ್ಕೆ 'ಕವಚ' ಅನ್ನು ಅನುಮೋದಿಸಲಾಗಿದೆ. ಇಲ್ಲಿಯವರೆಗೆ, ದಕ್ಷಿಣ ಮಧ್ಯ ರೈಲ್ವೆಯ (South Central Railway) ನಡೆಯುತ್ತಿರುವ ಯೋಜನೆಗಳಲ್ಲಿ 1098 ಕಿಲೋಮೀಟರ್ ರೂಟ್  ಮತ್ತು 65 ಲೋಕೋಗಳಲ್ಲಿ ಕವಚವನ್ನು ನಿಯೋಜಿಸಲಾಗಿದೆ.