* ಮಂಗಳ ಗ್ರಹದ ಅಧ್ಯಯನಕ್ಕೆ ತೆರಳಿದ್ದ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಬಾಹ್ಯಾಕಾಶ ನೌಕೆ ‘ಇಂಜೆನ್ಯುಯಿಟಿ’ ತನ್ನ ಹಾರಾಟವನ್ನು ನಿಲ್ಲಿಸಿದೆ.* ಕೇಪ್‌ ಕ್ಯಾನವೆರಲ್, ಅಮೆರಿಕ: 'ನಾಸಾ'ದ ಪುಟಾಣಿ ಹೆಲಿಕಾಪ್ಟರ್‌ 'ಇಂಜೆನ್ಯುಯಿಟಿ' ಮಂಗಳ ಗ್ರಹದಲ್ಲಿ ತನ್ನ ಕಡೆಯ ಹಾರಾಟವನ್ನು ನಡೆಸಿದೆ. 1.8 ಕೆ. ಜಿ ತೂಕದ 'ಇಂಜೆನ್ಯುಯಿಟಿ' ಮತ್ತೆಂದೂ ಹಾರಾಟ ನಡೆಸುವುದಿಲ್ಲ ಎಂದು ನಾಸಾ ಜನವರಿ 25 ರಂದು ತಿಳಿಸಿದೆ.* ಈ ಮೂಲಕ 706 ಕೋಟಿ ರೂ ವೆಚ್ಚದ (85 ಮಿಲಿಯನ್‌ ಡಾಲರ್) ಯೋಜನೆ ಅಂತ್ಯಗೊಂಡಿದೆ ಎಂದು ನಾಸಾ ಅಧಿಕಾರಿಗಳು ತಿಳಿಸಿದ್ದಾರೆ.* 'ಅಲ್ಪಾವಧಿಯ ತಾಂತ್ರಿಕ ಪ್ರಾತ್ಯಕ್ಷಿಕೆ ಉದ್ದೇಶದ 'ಇಂಜೆನ್ಯುಯಿಟಿ', ಸಣ್ಣ ಗಾತ್ರದ ರೊಬೊಟಿಕ್ ಹೆಲಿಕಾಪ್ಟರ್ 2021ರಲ್ಲಿ ಮಂಗಳ ಗ್ರಹಕ್ಕೆ ಕಾಲಿಟ್ಟಿತ್ತು. * ನಾಸಾದ ಇಂಜೆನ್ಯುಯಿಟಿ' ನೌಕೆ ಮೂರು ವರ್ಷಗಳಲ್ಲಿ 72 ಬಾರಿ ಹಾರಾಟ ನಡೆಸಿದ್ದು, 19ಕಿ.ಮೀ. ಕ್ರಮಿಸಿದೆ. ಇದು. ಉದ್ದೇಶಿತ ಯೋಜನೆಗಿಂತಲೂ 14 ಪಟ್ಟು ಅಧಿಕ. 24 ಮೀಟರ್ ಎತ್ತರದಲ್ಲಿ ಗಂಟೆಗೆ 36 ಕಿ.ಮೀ ವೇಗದಲ್ಲಿ ಈ ಹೆಲಿಕಾಪ್ಟರ್ ಕ್ರಮಿಸಿದೆ' ಎಂದು ನಾಸಾ ವಿವರಿಸಿದೆ.* 'ಈ ಅಸಾಧಾರಣ ಹೆಲಿಕಾಪ್ಟರ್ ನಿರೀಕ್ಷಿಸಿದ್ದಕ್ಕಿಂತಲೂ ಎತ್ತರದಲ್ಲಿ ಹಾರಾಟ ನಡೆಸಿದ್ದು, ಭಿನ್ನ ವಾತಾವರಣದಲ್ಲಿಯೂ ತನ್ನ ಸಾಮರ್ಥ್ಯ ನಿರೂಪಿಸಿತ್ತು' ಎಂದು ನಾಸಾದ ಆಡಳಿತಾಧಿಕಾರಿ ಬಿಲ್ ನೆಲ್ಸನ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.