Job Description: * ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರುವರಿ 1ರಂದು 2024-25ರ ಮಧ್ಯಂತರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಸತತ 6ನೇ ಬಜೆಟ್ ಮಂಡಿಸುವ ಮೂಲಕ ದಾಖಲೆ ನಿರ್ಮಿಸಲು ಸಜ್ಜಾಗಿದ್ದಾರೆ.* ಸತತ 6 ಬಾರಿ ಬಜೆಟ್ ಮಂಡಿಸಿ ದಾಖಲೆ ನಿರ್ಮಿಸಲಿರುವ ನಿರ್ಮಲಾ ಸೀತಾರಾಮನ್ ಈ ಸಾಧನೆ ಮಾಡಿದ ಎರಡನೇ ಹಣಕಾಸು ಸಚಿವೆ ಎಂದ ಹಿರಿಮೆಗೆ ಪಾತ್ರರಾಗಲಿದ್ದಾರೆ. ಮೊದಲ ದಾಖಲೆ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಮಾಡಿದ್ದಾರೆ.* ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ 6ನೇ ಬಜೆಟ್ ಮಂಡಿಸುವ ಮೂಲಕ ದಾಖಲೆ ನಿರ್ಮಿಸಲು ಸಜ್ಜಾಗಿದ್ದಾರೆ. ಇದರಲ್ಲಿ 5 ವಾರ್ಷಿಕ ಬಜೆಟ್ ಮತ್ತು ಒಂದು ಮಧ್ಯಂತರ ಸೇರಿದೆ.* ಸೀತಾರಾಮನ್ ಅವರು ಸತತ 5 ಬಜೆಟ್‌ಗಳನ್ನು ಮಂಡಿಸಿದ ಮನಮೋಹನ್ ಸಿಂಗ್, ಅರುಣ್ ಜೇಟ್ಲಿ, ಪಿ. ಚಿದಂಬರಂ ಮತ್ತು ಯಶವಂತ್ ಸಿನ್ಹಾ ಅವರ ಹಿಂದಿನ ದಾಖಲೆಗಳನ್ನು ಮುರಿದಿದ್ದಾರೆ. * ಮೊರಾರ್ಜಿ ದೇಸಾಯಿ ಅವರು ಹಣಕಾಸು ಸಚಿವರಾಗಿದ್ದ 1959-1964ರ ನಡುವೆ 5 ವಾರ್ಷಿಕ ಬಜೆಟ್ ಮತ್ತು ಒಂದು ಮಧ್ಯಂತರ ಬಜೆಟ್ ಮಂಡಿಸಿದ್ದರು. * 5 ವರ್ಷಗಳ ಪೂರ್ಣಾವಧಿಯ ಕೇಂದ್ರ ಸರ್ಕಾರ ತನ್ನ ಕೊನೆಯ ಬಜೆಟ್‌ ಅನ್ನು ಸಾಮಾನ್ಯವಾಗಿ ಮಧ್ಯಂತರ ಬಜೆಟ್‌ ಎಂದು ಕರೆಯುತ್ತದೆ.ಚಾಲ್ತಿಯಲ್ಲಿರುವ ಹಣಕಾಸು ವರ್ಷದ ಆರಂಭಕ್ಕೆ ಅಥವಾ ಕೊನೆಗೆ ಸಾರ್ವತ್ರಿಕ ಚುನಾವಣೆ ಬಂದರೆ ಆಗ ಮಂಡಿಸುವ ಬಜೆಟ್‌ ಪೂರ್ಣಕಾಲಿಕ ಬಜೆಟ್ ಆಗಿರುವುದಿಲ್ಲ. ಕೆಲವೇ ತಿಂಗಳ ಅವಧಿಯ ಖರ್ಚು ವೆಚ್ಚಗಳನ್ನು ನಿರ್ವಹಿಸುವ ಮುಂಗಡಪತ್ರವಾಗಿರುತ್ತದೆ.