* ಭಾರತೀಯ ರಿಸರ್ವ್ ಬ್ಯಾಂಕ್ ನ ಡೆಪ್ಯುಟಿ ಗವರ್ನರ್ ಎಂ ರಾಜೇಶ್ವರ್ ರಾವ್ ಅವರ ಸೇವಾ ಅವಧಿಯನ್ನು ಒಂದು ವರ್ಷ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶಿಸಿದೆ.* ಅಕ್ಟೋಬರ್ 9, 2024 ರಿಂದ ಜಾರಿಗೆ ಬರುವಂತೆ ರಾವ್ ಅವರನ್ನು ಒಂದು ವರ್ಷದ ಅವಧಿಗೆ ಮರು ನೇಮಕ ಮಾಡಲು ಅನುಮೋದನೆ ನೀಡಲಾಗಿದೆ ಎಂದು ಪ್ರಧಾನಿ ನೇತೃತ್ವದ ಸಂಪುಟದ ನೇಮಕಾತಿ ಸಮಿತಿ ಅಧಿಸೂಚನೆಯಲ್ಲಿ ತಿಳಿಸಿದೆ.* ರಾವ್ ಅವರ ಎರಡನೇ ಒಂದು ವರ್ಷದ ವಿಸ್ತರಣೆ ಇದಾಗಿದೆ. ಈ ಹಿಂದೆ, RBI ನ ಡೆಪ್ಯುಟಿ ಗವರ್ನರ್ ಆಗಿ ಅವರ ಅಧಿಕಾರಾವಧಿಯನ್ನು ಸರ್ಕಾರವು ಅಕ್ಟೋಬರ್ 9, 2023 ರಿಂದ ಜಾರಿಗೆ ಬರುವಂತೆ ಒಂದು ವರ್ಷ ವಿಸ್ತರಿಸಿತ್ತು.* ರಾವ್ ಅವರು ಅಕ್ಟೋಬರ್ 2020ರಲ್ಲಿ ಮೂರು ವರ್ಷಗಳ ಅವಧಿಗೆ RBIನ ಡೆಪ್ಯುಟಿ ಗವರ್ನರ್ ಆಗಿ ನೇಮಕಗೊಂಡಿದ್ದರು.* ಅರ್ಥಶಾಸ್ತ್ರ ವಿಷಯದಲ್ಲಿ ಪದವಿ ಹಾಗೂ ಕೊಚ್ಚಿ ವಿಶ್ವವಿದ್ಯಾಲಯದಿಂದ ಎಂಬಿಎ ಪೂರೈಸಿರುವ ರಾವ್ ಅವರು 1984ರಲ್ಲಿ ಕೇಂದ್ರೀಯ ಬ್ಯಾಂಕ್ ಗೆ ನೇಮಕಗೊಂಡಿದ್ದರು.